ಬಿಸಿಸಿಐ ವಾರ್ಷಿಕ ಕಾಂಟ್ರ್ಯಾಕ್ಟ್: ಬುಮ್ರಾ, ಪಾಂಡ್ಯಾಗೆ ಬಂಪರ್; ಎ ಪ್ಲಸ್ ಗ್ರೇಡ್ ನಲ್ಲಿ ಕೊಹ್ಲಿ, ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಎ ಪ್ಲಸ್ ನಲ್ಲಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಎ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.

Published: 16th April 2021 01:32 PM  |   Last Updated: 16th April 2021 02:06 PM   |  A+A-


Hardik Pandya

ಹಾರ್ದಿಕ್ ಪಾಂಡ್ಯ

Posted By : Srinivasamurthy VN
Source : PTI

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಎ ಪ್ಲಸ್ ನಲ್ಲಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಎ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಹೌದು..ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರಿಯ ಗುತ್ತಿಗೆಯ ಎ ಪ್ಲಸ್ ಗ್ರೇಡ್‌ ಮುಂದುವರೆದಿದ್ದು, ಈ ಮೂವರು ಆಟಗಾರರೂ ವಾರ್ಷಿಕ ತಲಾ 7 ಕೋಟಿ ರೂ ಪಡೆಯಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಿ ಗುಂಪಿನಿಂದ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ.

ಗುರುವಾರ ಪ್ರಕಟಿಸಿರುವ ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 28 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಮತ್ತು ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಅವರು ಇದೇ ಮೊದಲ ಸಲ ಸ್ಥಾನ ಪಡೆದುಕೊಂಡಿದ್ದಾರೆ. ಸಿ ಗ್ರೇಡ್ ನಲ್ಲಿರುವ ಇವರಿಬ್ಬರೂ ತಲಾ ಒಂದು ಕೋಟಿ ರೂಪಾಯಿ  ಪಡೆಯಲಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಎ ಗ್ರೇಡ್ ಮತ್ತು ಮಯಂಕ್ ಅಗರವಾಲ್ ಬಿ ಗ್ರೇಡ್‌ನಲ್ಲಿದ್ದಾರೆ. ಇವರಿಬ್ಬರೂ ಕ್ರಮವಾಗಿ ಐದು ಮತ್ತು ಮೂರು ಕೋಟಿ ಪಡೆಯುತ್ತಾರೆ.

ಇನ್ನು ಪಾಂಡ್ಯಾ ಈ ವರ್ಷ ಅವರು ಗಾಯದ ಸಮಸ್ಯೆಯಿಂದ ಹೆಚ್ಚು ಪಂದ್ಯಗಳಲ್ಲಿ ಆಡಿರಲಿಲ್ಲ. ಆಡಿದ ಕೆಲವು ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಅದಾಗ್ಯೂ ಆಡಿದ ಕೆಲವೇ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು.

ಆಟಗಾರರ ಶ್ರೇಣಿ ಮತ್ತು ವೇತನ ಪಟ್ಟಿ ಇಂತಿದೆ.
ಗ್ರೇಡ್‌ಗಳು

ಎ ಪ್ಲಸ್ (7 ಕೋಟಿ ರೂ): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ
ಎ (5 ಕೋಟಿ ರೂ): ಆರ್. ಅಶ್ವಿನ್, ರವೀಂದ್ರ ಜಡೇಜ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ
ಬಿ (3 ಕೋಟಿ ರೂ): ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್
ಸಿ (1 ಕೋಟಿ ರೂ): ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಾಹರ್, ಶುಭಮನ್ ಗಿಲ್, ಹನುಮವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್
 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp