ಐಪಿಎಲ್ 2021: ಗೆಲುವಿನ ಲಯಕ್ಕೆ ಮರಳಿದ ಚೆನ್ನೈ, ರಾಜಸ್ತಾನ ರಾಯಲ್ಸ್ ವಿರುದ್ಧ ಗೆಲುವು!
ಇಂಡಿಯನ್ ಪ್ರಿಮಿಯರ್ ಲೀಗ್ ನ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಲಯಕ್ಕೆ ಮರಳಿದ್ದು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
Published: 20th April 2021 12:06 AM | Last Updated: 20th April 2021 12:52 PM | A+A A-

ಸಿಎಸ್ ಕೆ
ಇಂಡಿಯನ್ ಪ್ರಿಮಿಯರ್ ಲೀಗ್ ನ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಲಯಕ್ಕೆ ಮರಳಿದ್ದು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಗಳಿಂದ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತ್ತು. ಚೆನ್ನೈ ನೀಡಿದ 189 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಪೇರಿಸಿದ್ದು 45 ರನ್ ಗಳಿಂದ ಚೆನ್ನೈಗೆ ಶರಣಾಗಿದೆ.
ಚೆನ್ನೈ ಪರ ಡುಪ್ಲೇಪಿಸ್ 33, ಮೋಯಿನ್ ಅಲಿ 26, ಸುರೇಶ್ ರೈನಾ 18, ಅಂಬಟ್ಟಿ ರಾಯುಡು 27 ಎಂಎಸ್ ಧೋನಿ 18 ಮತ್ತು ಡ್ವೈನ್ ಬ್ರಾವೋ 20 ರನ್ ಬಾರಿಸಿದ್ದಾರೆ.
ಆರ್ ಆರ್ ಪರ ಜೋಸ್ ಬಟ್ಲರ್ 49, ಮನನ್ ವೋಹ್ರಾ 14, ಶಿವಂ ದುಬೈ 17, ರಾಹುಲ್ ತೇವಾಟಿ 20, ಜಯದೇವ್ ಉನಾದ್ಕಟ್ 24 ರನ್ ಬಾರಿಸಿದ್ದಾರೆ.