ಮಂಕಡಿಂಗ್ ಕ್ರೀಡಾ ಸ್ಫೂರ್ತಿಗೆ ವಿರುದ್ಧ ಅನ್ನುವುದಾದರೆ ಇದಕ್ಕೆ ಏನು ಮಾಡಬೇಕು: ವೆಂಕಟೇಶ್ ಪ್ರಸಾದ್ ಗರಂ

ಈ ಹಿಂದೆ ರವಿಚಂದ್ರನ್ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದಾಗ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಅಶ್ವಿನ್ ರ ಕ್ರೀಡಾ ಸ್ಫೂರ್ತಿಯನ್ನು ಪ್ರಶ್ನಿಸಿದ್ದರು. ಆದರೆ ಇದೀಗ ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟು ಹೊರಬಂದರೆ ಏನು ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ. 
ಡ್ವೈನ್ ಬ್ರಾವೋ
ಡ್ವೈನ್ ಬ್ರಾವೋ

ಬೆಂಗಳೂರು: ಈ ಹಿಂದೆ ರವಿಚಂದ್ರನ್ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದಾಗ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಅಶ್ವಿನ್ ರ ಕ್ರೀಡಾ ಸ್ಫೂರ್ತಿಯನ್ನು ಪ್ರಶ್ನಿಸಿದ್ದರು. ಆದರೆ ಇದೀಗ ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟು ಹೊರಬಂದರೆ ಏನು ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ. 

ಇದಕ್ಕೆ ಕಾರಣವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯ. ಸಿಎಸ್ ಕೆ ತಂಡದ ಬ್ಯಾಟ್ಸ್ ಮನ್ ಡ್ವೈನ್ ಬ್ರಾವೋ ಬೌಲರ್ ಚೆಂಡನ್ನು ಎಸೆಯುವ ಮುನ್ನವೇ ಕ್ರೀಸ್ ನಿಂದ 2-3 ಅಡಿ ಮುಂದೆ ಬಂದಿದ್ದರು.

ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ನೆಟ್ಟಿಗರು ಮಂಕಡಿಂಗ್ ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ವಾದಿಸುವವರು ಬ್ಯಾಟ್ಸ್ ಮನ್ ಕ್ರೀಸ್ ನಿಂದ ಇಷ್ಟು ಮುಂದೆ ಬಂದಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪೂರಕವಾಗಿ ಎಂದು ವೆಂಕಟೇಶ್ ಪ್ರಸಾದ್ ಸಹ ಟ್ವೀಟ್ ಮಾಡಿದ್ದಾರೆ. 

ವೆಂಕಟೇಶ್ ಪ್ರಸಾದ್ ತಮ್ಮ ಟ್ವೀಟ್ ನಲ್ಲಿ ಮಂಕಡಿಂಗ್ ಕ್ರೀಡಾ ಸ್ಫೂರ್ತಿಗೆ ವಿರುದ್ಧ ಅನ್ನುವುದು ಹಾಸ್ಯಾಸ್ಪದ. ಬೌಲರ್ ಗೆರೆ ದಾಟಿದರೆ ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಆದರೆ ಬ್ಯಾಟ್ಸ್ ಮನ್ ಹಲವು ಅಡಿ ಮುಂದಿದ್ದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಬೌಲರ್ ಗಳಿಗೆ ಮಂಕಡಿಂಗ್ ಮೂಲಕ ರನೌಟ್ ಮಾಡುವ ಎಲ್ಲಾ ಅಧಿಕಾರ ಇದೆ ಎಂದು ಟ್ವೀಟಿಸಿದ್ದಾರೆ. 

ಕಳೆದ ಐಪಿಎಲ್ ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪರ ಆಡಿದ್ದ ಆರ್ ಅಶ್ವಿನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ರನ್ನು ಮಂಕಡಿಂಗ್ ಮೂಲಕ ರನೌಟ್ ಮಾಡಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಹಲವರು ಅಶ್ವಿನ್ ರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com