ಬ್ರಿಟನ್ ನ 'ಕೆಂಪು ಪಟ್ಟಿ'ಯಲ್ಲಿ ಭಾರತ; ಯೋಜನೆಯಂತೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ: ಐಸಿಸಿ

ಭಾರತ- ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯ ಯೋಜನೆಯಂತೆ ಜೂನ್ 18ಕ್ಕೆ ಸೌಥಾಂಪ್ಟನ್ ನಲ್ಲಿ ನಡೆಯಲಿದೆ ಎಂದು ಐಸಿಸಿ ಭರವಸೆ ನೀಡಿದೆ.
ಭಾರತೀಯ ಟೆಸ್ಟ್ ತಂಡ
ಭಾರತೀಯ ಟೆಸ್ಟ್ ತಂಡ

ದುಬೈ: ಭಾರತ- ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯ ಯೋಜನೆಯಂತೆ ಜೂನ್ 18ಕ್ಕೆ ಸೌಥಾಂಪ್ಟನ್ ನಲ್ಲಿ ನಡೆಯಲಿದೆ ಎಂದು ಐಸಿಸಿ ಭರವಸೆ ನೀಡಿದೆ. ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಭಾರತ ಕೆಂಪು ಪಟ್ಟಿಯಲ್ಲಿರುವುದಾಗಿ ಬ್ರಿಟನ್ ಹೇಳಿಕೆ ಬೆನ್ನಲ್ಲೇ, ಐಸಿಸಿ ಈ ರೀತಿಯ ಹೇಳಿಕೆ ನೀಡಿದೆ.

ಭಾರತ  ಕೆಂಪು ಪಟ್ಟಿ ಸೇರುವುದರೊಂದಿಗೆ ಇಲ್ಲಿಂದ ಎಲ್ಲಾ ರೀತಿಯ ಪ್ರಯಾಣವನ್ನು ಪರಿಣಾಮಕಾರಿಯಾಗಿ ನಿಷೇಧಿಸಲಾಗಿದೆ. ಸ್ವದೇಶಕ್ಕೆ ವಾಪಸ್ಸಾಗುವ ಇಂಗ್ಲೆಂಡ್ ನಿವಾಸಿಗಳಿಗೆ 10 ದಿನಗಳ ಹೋಟೆಲ್ ಕ್ವಾರಂಟೈನ್ ನನ್ನು ಕಡ್ಡಾಯಪಡಿಸಲಾಗಿದೆ. ಆದಾಗ್ಯೂ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ, ಜೀವ- ಸುರಕ್ಷತಾ ಪರಿಸರದಲ್ಲಿ ನಡೆಯಲಿದೆ ಎಂಬ ವಿಶ್ವಾಸವನ್ನು ಐಸಿಸಿ ವ್ಯಕ್ತಪಡಿಸಿದೆ. 

ಸಾಂಕ್ರಾಮಿಕದ ಮಧ್ಯ ಹೇಗೆ ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತಿತರ ಸದಸ್ಯರು ಹೇಳಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಯೋಜನೆಯಂತೆ ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಐಸಿಸಿ ಸೋಮವಾರ ರಾತ್ರಿ ಹೇಳಿದೆ.

ಕೆಂಪುಪಟ್ಟಿಯಲ್ಲಿ ಸೇರಿಸುವುದರಿಂದ ದೇಶಗಳ ಮೇಲೆ ಆಗುವ ಪರಿಣಾಮ ಕುರಿತಂತೆ ಪ್ರಸ್ತುತ ಇಂಗ್ಲೆಂಡ್ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿರುವುದಾಗಿಯೂ ಐಸಿಸಿ ತಿಳಿಸಿದೆ. 

ಇಂತಹ ಸಂದರ್ಭದಲ್ಲಿ ಏನನ್ನು ಹೇಳಲು ಆಗುತ್ತಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ, ಇಂಗ್ಲೆಂಡ್ ಗೆ ತೆರಳುವ ವೇಳೆಗೆ ಭಾರತ ಕೆಂಪು ಪಟ್ಟಿಯಲ್ಲಿರುವುದಿಲ್ಲ ಎಂಬ ಭರವಸೆ ಹೊಂದಿರುವುದಾಗಿ ಬಿಸಿಸಿಐ ಮೂಲಗಳು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜೂನ್ ನಲ್ಲಿ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಕೂಡಾ ಇಂಗ್ಲೆಂಡ್ ಗೆ ಪ್ರಯಾಣಿಸಲಿದೆ. ಪುರುಷರ ತಂಡ ಆಗಸ್ಟ್ 4 ರಿಂದ ಐದು ಟೆಸ್ಟ್ ಪಂದ್ಯಗಳನ್ನು ಇಂಗ್ಲೆಂಡ್ ನಲ್ಲಿ ಆಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com