ಅಷ್ಟು ಬೇಗ ಮರೆತುಬಿಟ್ರಾ: ಕೊಹ್ಲಿ- ಡಿವಿಲಿಯರ್ಸ್ ಪರಾಕ್ರಮ ನೆನಪಿಸಿ ರಾಜಸ್ತಾನದ ಕಾಲೆಳೆದ ಆರ್‌ಸಿಬಿ ಫ್ಯಾನ್ಸ್!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಡಿವಿಲಿಯರ್ಸ್-ಕೊಹ್ಲಿ
ಡಿವಿಲಿಯರ್ಸ್-ಕೊಹ್ಲಿ

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಎಬಿ ಡಿವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಅದ್ಭುತ ಬ್ಯಾಟಿಂಗ್ ಮಾಡಿದ ತಂಡಕ್ಕೆ ಆಸರೆಯಾಗಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ ಮುಂಚಿದ್ದಾರೆ. ಸಂಘಟನಾತ್ಮಕ ಪದರ್ಶನದ ಮೂಲಕ ಈ ಬಾರಿ ಆರ್ ಸಿಬಿ ಭರವಸೆಯ ತಂಡವಾಗಿದೆ. 

ಇನ್ನು ಇಂದು ಆರ್ ಸಿಬಿ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು ಈ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಅಲ್ಲದೆ ಈ ಬಾರಿಯೂ ಆರ್ ಸಿಬಿ ಆಟಗಾರರು ರಾಜಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡಲಿದ್ದು ಕಳೆದ ಬಾರಿ ರಾಜಸ್ತಾನ ವಿರುದ್ಧ ಕೊಹ್ಲಿ ಮತ್ತು ಎಬಿಡಿ ಆಡಿದ ಅದ್ಭುತ ಆಟದ ಬಗ್ಗೆ ಅಭಿಮಾನಿಗಳು ಆರ್ ಆರ್ ತಂಡಕ್ಕೆ ನೆನಪಿಸಲು ಪ್ರಾರಂಭಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ರಾಜಸ್ತಾನ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲೂ ಆರ್ ಸಿಬಿ ಗೆಲುವು ಸಾಧಿಸಿತ್ತು. ಇನ್ನು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆರ್ ಆರ್ ವಿರುದ್ಧ 648 ರನ್ ಬಾರಿಸಿರುವ ಎಬಿಡಿ 146 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com