ವಿರಾಟ್ ಕೊಹ್ಲಿಯ ವೇಗದ ದಾಖಲೆಯೊಂದನ್ನು ಧೂಳಿಪಟ ಮಾಡಿದ ಕೆಎಲ್ ರಾಹುಲ್!

ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ವೇಗದ ದಾಖಲೆಯೊಂದನ್ನು ಕನ್ನಡಿಗ ಕೆಎಲ್ ರಾಹುಲ್ ಧೂಳಿಪಟ ಮಾಡಿದ್ದಾರೆ.
ಕೊಹ್ಲಿ-ಕೆಎಲ್ ರಾಹುಲ್
ಕೊಹ್ಲಿ-ಕೆಎಲ್ ರಾಹುಲ್

ಚೆನ್ನೈ: ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ವೇಗದ ದಾಖಲೆಯೊಂದನ್ನು ಕನ್ನಡಿಗ ಕೆಎಲ್ ರಾಹುಲ್ ಧೂಳಿಪಟ ಮಾಡಿದ್ದಾರೆ.

ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೇಗವಾಗಿ 5 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. 

ಐಪಿಎಲ್ 14ನೇ ಆವೃತ್ತಿಯಲ್ಲಿ ಪಂಜಾಬ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕೆಎಲ್ ರಾಹುಲ್ ಈ ದಾಖಲೆ ಮಾಡಲು 143 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ ಕೊಹ್ಲಿ 167 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 

ವಿಶ್ವಕ್ರಿಕೆಟ್ ನಲ್ಲಿ ವೇಗವಾಗಿ 5000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರೀಸ್ ಗೇಲ್ ಭಾಜನರಾಗಿದ್ದಾರೆ. ಗೇಲ್ 132 ಇನ್ನಿಂಗ್ಸ್ ನಲ್ಲಿ ಈ ದಾಖಲೆ ಮಾಡಿದ್ದರು. ಇನ್ನು ಆಸ್ಟ್ರೇಲಿಯಾದ ಶೇನ್ ಮಾರ್ಷ್ ಸಹ ಈ ದಾಖಲೆ ಮಾಡಿದ್ದು ಅದಕ್ಕಾಗಿ ಅವರು 144 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 

ಭಾರತದ ಪೈಕಿ ಈ ಸಾಧನೆ ಮಾಡಿದ ಮೂವರು ಆಟಗಾರರಿದ್ದಾರೆ. ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ 5000 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com