ಕೊನೆಯಲ್ಲಿ ರವೀಂದ್ರ ಜಡೇಜ ಅಬ್ಬರದ ಬ್ಯಾಟಿಂಗ್: ಆರ್ ಸಿಬಿಗೆ 192 ರನ್ ಗುರಿ ನೀಡಿದ ಸಿಎಸ್ ಕೆ
ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 192 ರನ್ ಗಳ ಗುರಿಯನ್ನು ನೀಡಿದೆ.
Published: 25th April 2021 06:02 PM | Last Updated: 25th April 2021 06:12 PM | A+A A-

ರವೀಂದ್ರ ಜಡೇಜ
ಮುಂಬೈ: ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 192 ರನ್ ಗಳ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಸಿಎಸ್ ಕೆ ಪರ ಆರಂಭಿಕ ಫಾಫ್ ಡು ಪ್ಲಿಸಿಸ್ ಅರ್ಧಶತಕ ಬಾರಿಸಿದರೆ, ಇನ್ನಿಂಗ್ಸ್ ಅಂತ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಜಡೇಜ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರ್ ಸಿಬಿ ವೇಗಿ ಹರ್ಷಲ್ ಪಟೇಲ್ ಮೊದಲಿಗೆ ಮೂರು ವಿಕೆಟ್ ಕಬಳಿಸಿದರೂ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ 37 ರನ್ ನೀಡುವ ಮೂಲಕ ದುಬಾರೆಯೆನಿಸಿದರು. ಈ ಓವರ್ ನಲ್ಲಿ ಜಡೇಜ ಸತತ ನಾಲ್ಕು ಸೇರಿದಂತೆ ಒಟ್ಟು ಐದು ಸಿಕ್ಸರ್ ಗಳನ್ನು
ಬಾರಿಸಿದರು.