ಪ್ರತಿಯೊಬ್ಬರು ಮನೆಯಲ್ಲಿಯೇ ಇರಿ ಎಂದ ಆರ್ ಸಿಬಿ ಬಾಯ್ಸ್ -ವಿಡಿಯೋ

ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ವ್ಯಾಪಿಸಿರುವಂತೆಯೇ ಮಾರಕ ಕೊರೋನಾವೈರಸ್ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮನೆಯಲ್ಲಿಯೇ ಇರುವಂತೆ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡದ ಆಟಗಾರರು ಮನವಿ ಮಾಡಿಕೊಂಡಿದ್ದಾರೆ. 
ಆರ್ ಸಿಬಿ ಆಟಗಾರರು
ಆರ್ ಸಿಬಿ ಆಟಗಾರರು

ನವದೆಹಲಿ: ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ವ್ಯಾಪಿಸಿರುವಂತೆಯೇ ಮಾರಕ ಕೊರೋನಾವೈರಸ್ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮನೆಯಲ್ಲಿಯೇ ಇರುವಂತೆ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡದ ಆಟಗಾರರು ಮನವಿ ಮಾಡಿಕೊಂಡಿದ್ದಾರೆ. 

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಮತ್ತಿತರ  ಆಟಗಾರರು, ಪ್ರತಿಯೊಬ್ಬರು ಮನೆಯಲ್ಲಿಯೇ ಇರಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ಹೇಳುವ ವಿಡಿಯೋವೊಂದನ್ನು ಆರ್ ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಲಾಗಿದೆ. 

ವಿರಾಟ್ ಕೊಹ್ಲಿಯ ಸಂದೇಶದೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.ಕೈಗಳಿಗೆ ಸ್ಯಾನಿಟೈಸರ್ಸ್ ಹಾಕಿ,  ಎಲ್ಲಾ ವೇಳೆಯಲ್ಲೂ ಮಾಸ್ಕ್ ಧರಿಸಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡುತ್ತಾರೆ.ನಂತರ  ಕಾಣಿಸಿಕೊಳ್ಳುವ ಎಬಿ ಡಿವಿಲಿಯರ್ಸ್, ಕಠಿಣ ಪರಿಸ್ಥಿತಿಗೆ ಹೋದಾಗ ಸೂಪರ್ ಹಿರೋಗೆ ಕಾಯಲು ಸಾಧ್ಯವಿಲ್ಲ, ನೀವೆ ಸೂಪರ್ ಹಿರೋ ಆಗಬೇಕಾಗಿದೆ.ಸುರಕ್ಷಿತವಾಗಿ
ಮನೆಯಲ್ಲಿಯೇ ಇರಿ ಎನ್ನುತ್ತಾರೆ. 

ತದನಂತರ ಕಾಣುವ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಇದು ಕಠಿಣ ಸಂದರ್ಭವಾಗಿದ್ದು,  ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇರಿ ಎಂದು ಹೇಳುವುದು ವಿಡಿಯೋದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com