ಭಾರತದಲ್ಲಿ ಆಕ್ಸಿಜನ್ ಕೊರತೆ: ಪಿಎಂ ಕೇರ್ಸ್ ಫಂಡ್ ಗೆ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 50,000 ಡಾಲರ್ ದೇಣಿಗೆ!

ಭಾರತ ಕೊರೋನಾದಿಂದ ತತ್ತರಿಸಿದೆ. ಹೀಗಾಗಿ ಈ ದೇಶಕ್ಕಾಗಿ ನನ್ನ ಕಡೆಯಿಂದ ಪುಟ್ಟ ಸೇವೆ. ಇದನ್ನು ಐಪಿಎಲ್ ನ ನನ್ನ ಸಹ ಆಟಗಾರರು ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ನವದೆಹಲಿ: ಭಾರತದಲ್ಲಿ ಕೊರೋನಾ 2ನೇ ಅಲೆ ತನ್ನ ರೌದ್ರರೂಪ ತೋರಿಸುತ್ತಿದೆ. ಇನ್ನು ದಿನಕ್ಕೆ ಲಕ್ಷ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ದೇಶದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಐಪಿಎಲ್ ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ಪ್ಯಾಟ್ ಕಮಿನ್ಸ್ 50 ಸಾವಿರ ಡಾಲರ್ ಅನ್ನು ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡಿದ್ದಾರೆ. 

ಪ್ಯಾಟ್ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಖರೀದಿಸಲು ಪಿಎಂ ಕೇರ್ಸ್ ಫಂಡ್‌ಗೆ $ 50,000 ದೇಣಿಗೆ ಘೋಷಿಸಿದ್ದು ಐಪಿಎಲ್‌ನ ಸಹೋದ್ಯೋಗಿಗಳು ಸಹಕರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

'ಭಾರತವು ನಾನು ವರ್ಷಗಳಿಂದ ಪ್ರೀತಿಯಿಂದ ಪ್ರೀತಿಸುವ ದೇಶವಾಗಿದೆ. ಇಲ್ಲಿನ ಜನರು ನಾನು ಭೇಟಿಯಾದ ಅತ್ಯಂತ ಆತ್ಮೀಯರು ಮತ್ತು ದಯಾಮಣಿಗಳು. ಇಂತಹ ದೇಶದ ಜನರು ಇಂದು ಕೊರೋನಾದಿಂ ತುಂಬಾ ಬಳಲುತ್ತಿದ್ದಾರೆ. ಈ ವಿಚಾರ ಕೇಳಿ ತುಂಬಾ ದುಖಃವಾಗುತ್ತಿದೆ ಎಂದು ಕಮ್ಮಿನ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಮಧ್ಯೆಯೂ ಐಪಿಎಲ್ ಮುಂದುವರಿಯುವುದು ಸೂಕ್ತವೇ ಎಂಬ ಬಗ್ಗೆ ಇಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಲಾಕ್ ಡೌನ್ ನಂತಹ ಪರಿಸ್ಥಿತಿ ನಿಜಕ್ಕೂ ಕಷ್ಟಕರವಾದ ಸಂಗತಿಯಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ಪ್ರತಿದಿನ ಜನರಿಗೆ ಕೆಲ ಗಂಟೆಗಳ ಸಂತೋಷ ಮತ್ತು ವಿರಾಮವನ್ನು ನೀಡುತ್ತದೆ ಎಂದು ಅವರು ಹೇಳಿದರು.

"ಒಳ್ಳೆಯ ವಿಚಾರಕ್ಕಾಗಿ ಲಕ್ಷಾಂತರ ಜನರನ್ನು ತಲುಪಲು ಆಟಗಾರರಿಗೆ ಅನುವು ಮಾಡಿಕೊಡುವ ವೇದಿಕೆ ಇದಾಗಿದೆ. ಜೊತೆಗೆ ನಾವು ಹಲವು ಸವಲತ್ತು ಹೊಂದಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾನು 'ಪಿಎಂ ಕೇರ್ಸ್ ಫಂಡ್'ಗೆ ಕೊಡುಗೆ ನೀಡಿದ್ದೇನೆ, ನಿರ್ದಿಷ್ಟವಾಗಿ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮಾಡುವ ಉದ್ದೇಶಕ್ಕಾಗಿ ದೇಣಿಗೆ ನೀಡುತ್ತಿದ್ದೇನೆ ಎಂದು ಕಮಿನ್ಸ್ ಬರೆದಿದ್ದಾರೆ.

ಭಾರತ ಕೊರೋನಾದಿಂದ ತತ್ತರಿಸಿದೆ. ಹೀಗಾಗಿ ಈ ದೇಶಕ್ಕಾಗಿ ನನ್ನ ಕಡೆಯಿಂದ ಪುಟ್ಟ ಸೇವೆ. ಇದನ್ನು ಐಪಿಎಲ್ ನ ನನ್ನ ಸಹ ಆಟಗಾರರು ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com