ದೇಶದ ಪ್ರಸಿದ್ಧ ಈ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ರೋಹಿತ್ ಶರ್ಮಾ!

ಟೀಂ ಇಂಡಿಯಾದ ಖ್ಯಾತ ಆಟಗಾರ ರೋಹಿತ್ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, ದೇಶದ ಪ್ರಸಿದ್ಧ ರ‍್ಯಾಪರ್ ಬಾದ್‌ಶಾ ಅವರಿಗೆ ಹೋಲಿಕೆ ಮಾಡಿದ್ದಾರೆ.
ರಿಷಭ್ ಪಂತ್
ರಿಷಭ್ ಪಂತ್

ಲಂಡನ್: ಟೀಂ ಇಂಡಿಯಾದ ಖ್ಯಾತ ಆಟಗಾರ ರೋಹಿತ್ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, ದೇಶದ ಪ್ರಸಿದ್ಧ ರ‍್ಯಾಪರ್ ಬಾದ್‌ಶಾ ಅವರಿಗೆ ಹೋಲಿಕೆ ಮಾಡಿದ್ದಾರೆ. ರೋಹಿತ್ ಮತ್ತು ಪಂತ್ ಪ್ರಸ್ತುತ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ನಲ್ಲಿದ್ದಾರೆ. ಆಗಸ್ಟ್ 4 ರಿಂದ ಮೊದಲ ಟೆಸ್ಟ್ ಪಂದ್ಯ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾಗಲಿದೆ.

ಫೋಟೋದಲ್ಲಿ ಬಿಳಿ ಟಿ ಶರ್ಟ್ ಧರಿಸಿರುವ ಪಂತ್, ಬೆಳ್ಳಿಯ ಚೈನ್, ಹಳದಿ ಸನ್ ಗ್ಲಾಸ್ ಹಾಕಿಕೊಂಡಿದ್ದು, ಅತ್ಯುತ್ಸಾಹದಲ್ಲಿ ನಿಂತಿದ್ದಾರೆ. ನಾವು ಇಲ್ಲಿ ನಮ್ಮದೇ ಬಾದ್‌ಶಾವನ್ನು ಹೊಂದಿದ್ದೇವೆ ಎಂಬ ಶೀರ್ಷಿಕೆಯಡಿ ರೋಹಿತ್ ಶರ್ಮಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಪಂತ್, ಹಾಹಾಹ ಕ್ಯಾ ಭಯ ಯಾರ್ ಎಂದಿದ್ದಾರೆ. ಈ ಫೋಟೋಗೆ ರೋಹಿತ್ ಫ್ಯಾನ್ಸ್ ಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಈ ಮಧ್ಯೆ 'ನಮ್ಮ ಅತ್ಯಂತ ಸ್ವಂತ ಚಾಚಾ ನೆಹರು' ಎಂದು ಕ್ರಿಕೆಟರ್ ಕೇದಾರ್ ಜಾದವ್ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com