ಅಕ್ಟೋಬರ್ 24 ರಂದು ಭಾರತ- ಪಾಕ್ ನಡುವಣ ಟಿ-20 ವಿಶ್ವಕಪ್ ಪಂದ್ಯ ಸಾಧ್ಯತೆ

ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಣ ಅಕ್ಟೋಬರ್ 24 ಭಾನುವಾರದಂದು ಟಿ-20 ವಿಶ್ವ ಕಪ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಇನ್ನೂ ಕೆಲ ದಿನಗಳಲ್ಲಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಲಿದೆ.
ಭಾರತ- ಪಾಕ್ ತಂಡಗಳ ಸಾಂದರ್ಭಿಕ ಚಿತ್ರ
ಭಾರತ- ಪಾಕ್ ತಂಡಗಳ ಸಾಂದರ್ಭಿಕ ಚಿತ್ರ

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಣ ಅಕ್ಟೋಬರ್ 24 ಭಾನುವಾರದಂದು ಟಿ-20 ವಿಶ್ವ ಕಪ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಇನ್ನೂ ಕೆಲ ದಿನಗಳಲ್ಲಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಹೆಚ್ಚು ಪೈಪೋಟಿ ಹಾಗೂ ಕುತೂಹಲಕಾರಿಯಾಗುವುದರಿಂದ ವಾರಾಂತ್ಯದಲ್ಲಿ ನಡೆಸಲಾಗುತ್ತಿದೆ.

ಅಕ್ಟೋಬರ್ 17 ರಂದು ಮಸ್ಕತ್, ಒಮನ್ ನಲ್ಲಿ ಮೊದಲ ವಾರದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಪ್ರಮುಖ ರಾಬಿನ್ ಸುತ್ತಿನ ಪಂದ್ಯಗಳನ್ನು ಇಂಡೋ- ಪಾಕ್ ಪಂದ್ಯದೊಂದಿಗೆ ಉತ್ತಮ ಟಿಆರ್ ಪಿಯೊಂದಿಗೆ ಆರಂಭಿಸಲಾಗುತ್ತಿದೆ. ಆದ್ದರಿಂದ ಅಕ್ಟೋಬರ್ 24 ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯುವ ಸಾಧ್ಯತೆಯಿರುವುದಾಗಿ ಐಸಿಸಿ ಮೂಲಗಳು ತಿಳಿಸಿವೆ.

ಭಾರತ ಮತ್ತು ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವಿಜೇತ ರಾಷ್ಟ್ರ ನ್ಯೂಜಿಲೆಂಡ್ ಮತ್ತು ಅಪ್ಘಾನಿಸ್ತಾನದೊಂದಿಗೆ ಗ್ರೂಪ್ 2 ಪಟ್ಟಿಯಲ್ಲಿವೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಗ್ರೂಪ್ 1 ರ ಪಟ್ಟಿಯಲ್ಲಿವೆ.  ಐಸಿಸಿ ಪ್ರಕಾರ ಮಾರ್ಚ್ 20, 2021ರ  ಶ್ರೇಯಾಂಕದ ಆಧಾರದ ಮೇಲೆ ಸೂಪರ್ 12 ಗುಂಪನ್ನು ಆಯ್ಕೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com