ಎರಡನೇ ಟೆಸ್ಟ್: ಗಾಯಗೊಂಡ ಶಾರ್ದೂಲ್ ಬದಲಿಗೆ ಆರ್ ಅಶ್ವಿನ್ ಆಡುವ ಸಾಧ್ಯತೆ
ಇಂಗ್ಲೆಂಡ್ ವಿರುದ್ಧ ಆಗಷ್ಟ್ 12 ರಿಂದ 16 ರ ವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಗಾಯಗೊಂಡ ಶಾರ್ದೂಲ್ ಬದಲಿಗೆ ಟೀಂ ಇಂಡಿಯಾದ ಭರವಸೆಯ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
Published: 11th August 2021 03:58 PM | Last Updated: 11th August 2021 04:15 PM | A+A A-

ಆರ್.ಅಶ್ವಿನ್
ಲಂಡನ್: ಇಂಗ್ಲೆಂಡ್ ವಿರುದ್ಧ ಆಗಷ್ಟ್ 12 ರಿಂದ 16 ರ ವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಗಾಯಗೊಂಡ ಶಾರ್ದೂಲ್ ಠಾಕೂರ್ ಬದಲಿಗೆ ಟೀಂ ಇಂಡಿಯಾದ ಭರವಸೆಯ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ತರಬೇತಿ ಅವಧಿಯಲ್ಲಿ ಶಾರ್ದೂಲ್ ಠಾಕೂರ್ ಅವರ ಮಂಡಿಗೆ ಗಾಯವಾಗಿದ್ದು, ಅವರ ಬದಲು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಆರ್ ಅಶ್ವಿನ್ ಅವರನ್ನು ಆಡಿಸುವ ಸಾಧ್ಯತೆ ಇದೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಸ್ಪಿನ್ನರ್ ಅಶ್ವಿನ್ ಎರಡನೇ ಟೆಸ್ಟ್ ಆಡುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಬಹುದು. ಆದರೆ ಲಂಡನ್‌ನ ಲಾರ್ಡ್ಸ್‌ನಲ್ಲಿ ಗುರುವಾರ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಭಾರತವು ಇಂಗ್ಲೆಂಡ್ ಅನ್ನು ಸಮರ್ಥವಾಗಿ ಎದುರಿಸಿಲು ಅನುಭವಿ ಬ್ಯಾಟಿಂಗ್ ತಂಡದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.
ಲಾರ್ಡ್ಸ್‌ನಲ್ಲಿ ಸೋಮವಾರ ನಡೆದ ನೆಟ್ಸ್ ಅಭ್ಯಾಸದ ವೇಳೆ ಠಾಕೂರ್ ಅವರ ಮಂಡಿಗೆ ಗಾಯವಾಗಿದೆ. ಹೀಗಾಗಿ ದ್ವಿತೀಯ ಟೆಸ್ಟ್‌ಗೆ ಶಾರ್ದೂಲ್ ಠಾಕೂರ್ ಲಭ್ಯತೆ ಅನುಮಾನ ಎಂಬಂತ್ತಾಗಿದೆ.