ಐಸಿಸಿ ಟೆಸ್ಟ್ ರ್ಯಾಂಕಿಂಗ್: ಐದನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ, 9ನೇ ಸ್ಥಾನಕ್ಕೆ ಜಿಗಿದ ಬುಮ್ರಾ

ಭಾರತ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಕೊನೆಯಾಗುತ್ತಿದ್ದಂತೆಯೇ ಇತ್ತ ಐಸಿಸಿ ತನ್ನ ಟೆಸ್ಟ್ ರ್ಯಾಂಕಿಂಗ್ ಅನ್ನು ಪರಿಷ್ಕರಿಸಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಭಾರತ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಕೊನೆಯಾಗುತ್ತಿದ್ದಂತೆಯೇ ಇತ್ತ ಐಸಿಸಿ ತನ್ನ ಟೆಸ್ಟ್ ರ್ಯಾಂಕಿಂಗ್ ಅನ್ನು ಪರಿಷ್ಕರಿಸಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹೌದು.. ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಪರಿಷ್ಕರಿಸಿದ್ದು, 4ನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಹಿಂದೆ ಐದನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ನಾಲ್ಕನೇ ಸ್ಥಾನಕ್ಕೇರಿದ್ದಾರೆ. 

ರೂಟ್ ಮೊದಲ ಟೆಸ್ಟ್ ಪಂದ್ಯದಲ್ಲಿ 64 ಮತ್ತು 109 ರನ್ ಗಳಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ರೇಟಿಂಗ್ಸ್ ನಲ್ಲಿ 49 ಅಂಕ ಹೆಚ್ಚಿಸಿಕೊಂಡಿದ್ದಾರೆ.

ಇನ್ನು ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಮತ್ತೆ ಅಗ್ರ 10ರೊಳಗೆ ಸ್ಥಾನ ಪಡೆದಿದ್ದು, 9ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಮ್ರಾ ಮೊದಲ ಟೆಸ್ಚ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 110 ರನ್ ನೀಡಿ 9 ವಿಕೆಟ್ ಕಬಳಿಸಿದ್ದರು.  2019ರಲ್ಲಿ ಬುಮ್ರಾ ವೃತ್ತಿ ಜೀವನ ಶ್ರೇಷ್ಠ 3ನೇ ರ್ಯಾಂಕ್ ಗೇರಿದ್ದರು.  

ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ 901 ಅಂಕಗಳೊಂದಿಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಆಸಿಸ್ ದೈತ್ಯ ಸ್ಟೀವ್ ಸ್ಮಿತ್ 891 ಅಂಕಗಳೊಂದಿಗೆ 2 ಮತ್ತು ಆಸ್ಟ್ರೇಲಿಯಾದ ಮಾರ್ನಸ್ ಲಬುಶ್ಚೇನ್ 878 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

ಬೌಲರ್ ಗಳ ಪಟ್ಟಿಯಲ್ಲಿ ಆಸ್ಚ್ರೇಲಿಯಾದ ಪ್ಯಾಟ್ ಕಮಿನ್ಸ್ 908 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ಗು, ಭಾರತದ ಆರ್ ಅಶ್ವಿನ್ 856 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಜೇಮ್ಸ್ ಆ್ಯಂಡರ್ಸೆನ್ 7ನೇ ಸ್ಥಾನಕ್ಕೇರಿದ್ದು, ಭಾರತದ ಶಾರ್ದೂಲ್ ಠಾಕೂರ್ 19 ಸ್ಥಾನ ಜಿಗಿತ ಕಂಡು 55ನೇ ಸ್ಥಾನಕ್ಕೇರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com