ಟೀಂ ಇಂಡಿಯಾದೊಂದಿಗೆ ಸರಣಿ, ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಹರಿದ ಹಣದ ಹೊಳೆ!

ಟೀಂ ಇಂಡಿಯಾದೊಂದಿಗೆ ಸರಣಿ ಆಯೋಜಿಸಲು ಜಗತ್ತಿನ ಯಾವುದೇ ಕ್ರಿಕೆಟ್ ಮಂಡಳಿಗಳಾದರೂ ತೀವ್ರ ಆಸಕ್ತಿ ತೋರಿಸುತ್ತವೆ. ಏಕೆಂದರೆ, ಭಾರತ ತಂಡದ ಜೊತೆ ಆಟವಾಡಿದರೆ ಎದುರಾಳಿ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಹಣದ ಹೊಳೆ ಹರಿದುಬರುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಟೀಂ ಇಂಡಿಯಾದೊಂದಿಗೆ ಸರಣಿ ಆಯೋಜಿಸಲು ಜಗತ್ತಿನ ಯಾವುದೇ ಕ್ರಿಕೆಟ್ ಮಂಡಳಿಗಳಾದರೂ ತೀವ್ರ ಆಸಕ್ತಿ ತೋರಿಸುತ್ತವೆ. ಏಕೆಂದರೆ, ಭಾರತ ತಂಡದ ಜೊತೆ ಆಟವಾಡಿದರೆ ಎದುರಾಳಿ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಹಣದ ಹೊಳೆ ಹರಿದುಬರುತ್ತದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ.. ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡು ಸ್ವದೇಶದಲ್ಲಿ ದ್ವೈವಾರ್ಷಿಕ ಸರಣಿ ಆಯೋಜಿಸಿತ್ತು. ಈ ಸರಣಿಯಿಂದ ನಷ್ಟದಿಂದ ಪಾತಾಳಕ್ಕೆ ತಲುಪಿದ್ದ ಶ್ರೀ ಲಂಕಾ ಕ್ರಿಕೆಟ್ ಮಂಡಳಿಗೆ ಹಣದ ಹೊಳೆಯೇ ಹರಿದಿದೆ. ಆಟಗಾರರಿಗೆ ವೇತನ ಪಾವತಿಸಲು ಸಾಧ್ಯವಿಲ್ಲದಂತಹ ದುಸ್ಥಿತಿಯಲ್ಲಿದ್ದ ಮಂಡಳಿಗೆ ನೂರು ಕೋಟಿಗೂ ಹೆಚ್ಚು ಆದಾಯ ತಂದುಕೊಟ್ಟದೆ.

ಶ್ರೀ ಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರ ಪ್ರಕಾರ, ಈ ಸರಣಿಯ ಮೂಲಕ ಲಂಕಾ ಮಂಡಳಿಗೆ 107.7 ಕೋಟಿ ರೂ. ಆದಾಯ ಬಂದಿದೆಯಂತೆ.

ವಾಸ್ತವವಾಗಿ ಈ ಪ್ರವಾಸದಲ್ಲಿ ಮೊದಲ ಮೂರು ಏಕದಿನಗಳ ಸರಣಿ ಮಾತ್ರ ನಡೆಯಬೇಕಿತ್ತು. ಆದರೆ, ಅಲ್ಲಿನ ಮಂಡಳಿ ಬಿಸಿಸಿಐಗೆ ಮನವಿ ಮಾಡಿಕೊಂಡು ಜತೆಗೆ ಇನ್ನೂ ಮೂರು ಟಿ20 ಸರಣಿ ಆಡಲು ಮನವೊಲಿಸಿತ್ತು. ಇದು ಅಲ್ಲಿನ ಕ್ರಿಕೆಟ್ ಮಂಡಳಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸಿದೆ. ಪ್ರಸಾರ, ಇತರ ಪ್ರಾಯೋಜಕತ್ವಗಳ ಮೂಲಕ ಭಾರಿ ಹಣ ಸಂಗ್ರಹಿಸಿದೆ.

ಏತನ್ಮಧ್ಯೆ, ಸರಣಿಗಾಗಿ ಆಗಮಿಸಿ ಯಶಸ್ವಿಗೊಳಿಸಿದ ಕೋಚ್ ರಾಹುಲ್ ದ್ರಾವಿಡ್, ಧವನ್ ಪಡೆಗೆ ಶ್ರೀಲಂಕಾ ಮಂಡಳಿ ಧನ್ಯವಾದ ಸಲ್ಲಿಸಿದೆ. 

ಈ ಪ್ರವಾಸದಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಗೆದ್ದಿದೆ. ಟಿ 20 ಸರಣಿಯನ್ನು ಶ್ರೀಲಂಕಾ ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com