69 ವರ್ಷಗಳ ಹಳೆಯ ದಾಖಲೆ ಧೂಳಿಪಟ ಮಾಡಿದ ರೋಹಿತ್-ರಾಹುಲ್ ಜೋಡಿ!

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ 69 ವರ್ಷಗಳ ಹಳೆಯ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. 
ಕೆಎಲ್ ರಾಹುಲ್-ರೋಹಿತ್
ಕೆಎಲ್ ರಾಹುಲ್-ರೋಹಿತ್

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ 69 ವರ್ಷಗಳ ಹಳೆಯ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. 

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಭರ್ಜರಿ ಓಪನ್ ಮಾಡಿದರು.

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ರೋಹಿತ್ ಮತ್ತು ರಾಹುಲ್ ತಮ್ಮ 100 ರನ್ ಆರಂಭಿಕ ಜೊತೆಯಾಟದೊಂದಿಗೆ ಟೆಸ್ಟ್ ನಲ್ಲಿ ಭಾರತದ 69 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್ ಗೆ 126 ರನ್ ಬಾರಿಸಿದ್ದರು.

1952ರ ನಂತರ ಮೊದಲ ಬಾರಿಗೆ ಲಾರ್ಡ್ಸ್‌ನಲ್ಲಿ ಭಾರತದ ಮೊದಲ 100 ರನ್ ಗಳ ಜೊತೆಯಾಟ ದಾಖಲಾಗಿತ್ತು. ನಂತರ ಇದೀಗ ಇವರಿಬ್ಬರು 1952ರಲ್ಲಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 106 ರನ್ ಗಳ ಆರಂಭಿಕ ಜೊತೆಯಾಟವನ್ನು ಮುರಿದಿದ್ದಾರೆ. ರೋಹಿತ್ 44ನೇ ಓವರ್‌ನಲ್ಲಿ 145 ಎಸೆತಗಳಲ್ಲಿ 83 ರನ್ ಗಳಿಸಿ ಔಟಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com