2ನೇ ಟೆಸ್ಟ್, 4ನೇ ದಿನದಾಟ ಅಂತ್ಯ: ಭಾರತಕ್ಕೆ 154 ರನ್ ಗಳ ಮುನ್ನಡೆ, ಇಂಗ್ಲೆಂಡ್ ಮೇಲುಗೈ

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 154 ಮುನ್ನಡೆ ಸಾಧಿಸಿದೆ.
ಮೊಯಿನ್ ಅಲಿ ಬೌಲಿಂಗ್
ಮೊಯಿನ್ ಅಲಿ ಬೌಲಿಂಗ್

ಲಾರ್ಡ್ಸ್: ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 154 ಮುನ್ನಡೆ ಸಾಧಿಸಿದೆ.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಗಳನ್ನು ಕಳೆದುಕೊಂಡು 181 ರನ್ ಗಳಿಸಿದೆ. ದಿನದಾಟದಂತ್ಯದ ಭಾರತದ ಮೂರು ಪ್ರಮುಖ ವಿಕೆಟ್ ಗಳು ಪತನವಾಗಿದ್ದು, ಇಂಗ್ಲೆಂಡ್ ಮೇಲುಗೈ ಸಾಧಿಸುವಂತೆ ಮಾಡಿತು. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ರವೀಂದ್ರ  ಜಡೇಜಾ ವಿಕೆಟ್ ಗಳು ಕೇವಲ 8 ಓವರ್ ಗಳ ಅಂತರದಲ್ಲಿ ಪತವಾಯಿತು. ಇದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇಂಗ್ಲೆಂಡ್ ಮೇಲುಗೈ ಸಾಧಿಸುವಂತೆ ಮಾಡಿದೆ. 

ಪ್ರಸ್ತುತ ಕ್ರೀಸ್ ನಲ್ಲಿ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಕ್ರೀಸ್ ನಲ್ಲಿದ್ದು, ನಾಳೆ ಅಂದರೆ ಸೋಮವಾರ ಪಂದ್ಯದ ಅಂತಿಮ ದಿನ ಗರಿಷ್ಠ ಮೊತ್ತ ಪೇರಿಸಿ ಇಂಗ್ಲೆಂಡ್ ಗೆ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡಲು ಭಾರತ ಹವಣಿಸುತ್ತಿದೆ. ಅಂತೆಯೇ ಬೇಗನೇ ಕಟ್ಟಿಹಾಕಿ ಕಡಿಮೆ ಮೊತ್ತವನ್ನು ಚೇಸ್ ಮಾಡಿ  ಪಂದ್ಯ ಗೆಲ್ಲಲು ಇಂಗ್ಲೆಂಡ್ ಹವಣಿಸುತ್ತಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಪೇರಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ಭಾರತ ದ್ವಿತೀಯ  ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿ ಆಡುತ್ತಿರುವುದರಿಂದ ದೊಡ್ಡ ಮೊತ್ತ ಸಂಪಾದಿಸುವುದು ಕಷ್ಟ ಸಾಧ್ಯವೆನಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com