ಭಾರತ-ಇಂಗ್ಲೆಂಡ್ ಟೆಸ್ಟ್: ಸರಣಿ ಮುನ್ನಡೆಯತ್ತ ವಿರಾಟ್ ಪಡೆಯ ಚಿತ್ತ

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 151 ರನ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಬುಧವಾರ ಇಲ್ಲಿ ಹೆಡಿಂಗ್ಲಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ತನ್ನ ಮುನ್ನಡೆ ವೃದ್ಧಿಸಲು ಕಣಕ್ಕೆ ಇಳಿಯಲಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡ
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡ

 ಲೀಡ್ಸ್‌: ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 151 ರನ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಬುಧವಾರ ಇಲ್ಲಿ ಹೆಡಿಂಗ್ಲಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ತನ್ನ ಮುನ್ನಡೆ ವೃದ್ಧಿಸಲು ಕಣಕ್ಕೆ ಇಳಿಯಲಿದೆ.

ಆಗಸ್ಟ್ 2002 ರಲ್ಲಿ ಭಾರತವು ಈ ಮೈದಾನದಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು. ಮತ್ತು ಅದನ್ನು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆದ್ದಿತು. ಈ ಮೊದಲು ಜೂನ್ 1986 ರಲ್ಲಿ, ಭಾರತವು ಈ ಮೈದಾನದಲ್ಲಿ ಇಂಗ್ಲೆಂಡ್ ಅನ್ನು 279 ರನ್ ಗಳಿಂದ ಸೋಲಿಸಿತ್ತು. ಈ ದಾಖಲೆಯನ್ನು ನೋಡಿದರೆ, ಭಾರತ ಲೀಡ್ಸ್ ನಲ್ಲಿ 2-0ಗೆ ತಮ್ಮ ಮುನ್ನಡೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ. 

ಮತ್ತೊಂದೆಡೆ, ಇಂಗ್ಲೆಂಡ್ ಈ ಮೈದಾನದಲ್ಲಿ ನಡೆದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 55 ರನ್ ಮತ್ತು ಆಸ್ಟ್ರೇಲಿಯಾವನ್ನು ಒಂದು ವಿಕೆಟ್ ನಿಂದ ಸೋಲಿಸಿತ್ತು. ಈ ದಾಖಲೆಯನ್ನು ನೋಡಿದರೆ, ಇಂಗ್ಲೆಂಡ್ ಸರಣಿಯಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.

ಆದರೆ ಲಾರ್ಡ್ಸ್‌ನ ಐದನೇ ಮತ್ತು ಅಂತಿಮ ದಿನದಲ್ಲಿ ಭಾರತ ನೀಡಿದ ಪ್ರದರ್ಶನವನ್ನು ಗಮನಿಸಿದರೆ, ಮೂರನೇ ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನವನ್ನು ಮೇಲುಗೈ ಎಂದು ಪರಿಗಣಿಸಬಹುದು. ನಾಲ್ವರು ಭಾರತೀಯ ವೇಗದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಗಳನ್ನು ಕಾಡಿದರು. ಈ ವರ್ಷ ಏಪ್ರಿಲ್‌ನಲ್ಲಿ, ಆದ ಹಿಮಪಾತವು ಹೆಡಿಂಗ್ಲಿಯ ಮೈದಾನವನ್ನು ಸಂಪೂರ್ಣವಾಗಿ ಆವರಿಸಿತ್ತು. ಮತ್ತು ಗ್ಲಾಮೋರ್ಗಾನ್ ಮತ್ತು ಯಾರ್ಕ್ಷೈರ್ ನಡುವಿನ ಕೌಂಟಿ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತ್ತು.

ಈ ಮೈದಾನದಲ್ಲಿ ಆಡಿದ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋತಿತ್ತು ಆದರೆ ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಅಂತ್ಯ ಕಂಡಿದೆ. ನಂತರ ಭಾರತವು ಮುಂದಿನ ಎರಡು ಟೆಸ್ಟ್‌ಗಳಲ್ಲಿ ಜಯ ಸಾಧಿಸಿತ್ತು. ಭಾರತವು ಏಳನೇ ಬಾರಿಗೆ ಹೆಡಿಂಗ್ಲೆ ಮೈದಾನದಲ್ಲಿ ಆಡಲಿದ್ದು, ಕೊನೆಯ ಬಾರಿಗೆ ಭಾರತವು ಇನ್ನಿಂಗ್ಸ್ ಮತ್ತು 46 ರನ್ ಗಳಿಸಿ ಹೆಡ್ಡಿಂಗ್ಲಿಯಲ್ಲಿ ಜಯಗಳಿಸಿತ್ತು. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯ ಶತಕಗಳನ್ನು ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಸಚಿನ್ 193 ರನ್ ಗಳಿಗೆ ಔಟಾಗುವ ಮೂಲಕ ದ್ವಿಶತಕ ತಪ್ಪಿಸಿಕೊಂಡರು. ಬೌಲಿಂಗ್‌ನಲ್ಲಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಅತ್ಯಂತ ಸ್ಮರಣೀಯ ಗೆಲುವನ್ನು ನೀಡಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಫಾರ್ಮ್‌ಗೆ ಮರಳಿದ್ದು, ತಂಡದ ಚಿಂತೆ ದೂರ ಮಾಡಿದೆ. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಲೋಕೇಶ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.

ವಿರಾಟ್ ತನ್ನ ಟೆಸ್ಟ್ ನಾಯಕತ್ವವನ್ನು ಸಾಬೀತುಪಡಿಸಲು ನಿರತರಾಗಿದ್ದಾರೆ. ಲಾರ್ಡ್ಸ್‌ನಲ್ಲಿ ಗೆಲುವಿನೊಂದಿಗೆ ಅವರು ತಮ್ಮ 37 ನೇ ವಿಜಯವನ್ನು ಸಾಧಿಸಿದರು. ಮತ್ತು ವೆಸ್ಟ್ ಇಂಡೀಸ್ ದಂತಕಥೆ ಕ್ಲೈವ್ ಲಾಯ್ಡ್ ಅವರನ್ನು ಹಿಂದಿಕ್ಕಿದರು. ಲಾಯ್ಡ್ 74 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡರು ಮತ್ತು 36 ಪಂದ್ಯಗಳನ್ನು ಗೆದ್ದಿದ್ದರು. ವಿರಾಟ್ ಪ್ರಸ್ತುತ ಟೆಸ್ಟ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ.

ಲೀಡ್ಸ್ ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಕಾಣುತ್ತದೆ.

ಇಂಗ್ಲೆಂಡ್ ಲಾರ್ಡ್ಸ್ ನಲ್ಲಿ ಸೋಲು ಕಂಡರೂ, ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ಜೋ ರೂಟ್ ಅವರನ್ನು ಅತಿಯಾಗಿ ಅವಲಂಬಿಸುವುದು ಅವರಿಗೆ ಕಳವಳಕಾರಿ ಸಂಗತಿಯಾಗಿದೆ. ಭುಜದ ಗಾಯದಿಂದಾಗಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಮೂರನೇ ಟೆಸ್ಟ್ ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಸಕೀಬ್ ಮೆಹಮೂದ್ ರಿಗೆ ಸ್ಥಾನ ಸಿಗುವ ಎಲ್ಲ ಭರವಸೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com