ಲಾರ್ಡ್ಸ್ ಟೆಸ್ಟ್: ಮೈದಾನದಲ್ಲೇ ಅಲ್ಲ, ಲಾಂಗ್ ರೂಮಿನಲ್ಲೂ ನಡೆದಿತ್ತು ಕೊಹ್ಲಿ-ರೂಟ್ ನಡುವೆ ಮಾತಿನ ಚಕಮಕಿ!

ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು.
ಕೊಹ್ಲಿ-ರೂಟ್
ಕೊಹ್ಲಿ-ರೂಟ್

ಲಂಡನ್: ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು. 

ಟೆಲಿಗ್ರಾಫ್ ಸ್ಪೋರ್ಟ್ಸ್ ಪ್ರಕಾರ, ಜಸ್ ಪ್ರೀತ್ ಬುಮ್ರಾ ಕೊನೆಯ ಓವರ್ ಮುಗಿಸಲು 10 ಎಸೆತ ತೆಗೆದುಕೊಂಡಿದ್ದರು. ಅಲ್ಲದೆ ಜೇಮ್ಸ್ ಆಂಡರ್ಸನ್ ಗೆ ಬೌನ್ಸರ್ ಗಳ ಸುರಿಮಳೆಗೈದಿದ್ದರು. ಇದು ಲಾರ್ಡ್ಸ್ ಪೆವಿಲಿಯನ್‌ನಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು. 

ಇಂಗ್ಲೆಂಡಿನ ನಾಯಕ ಜೋ ರೂಟ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ ಗೆ ಹೋಗುವಾಗ ಪದಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಲಾರ್ಡ್ಸ್ ಟೆಸ್ಟ್ ನ ಮೂರನೇ ದಿನದ ಅಂತಿಮ ಸೆಷನ್ ನಲ್ಲಿ ತಮ್ಮ ಮತ್ತು ಭಾರತೀಯ ಆಟಗಾರರ ನಡುವೆ ಏನು ನಡೆಯಿತು ಎಂಬುದರ ಬಗ್ಗೆ ಬಹಿರಂಗಪಡಿಸಿದರು. ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತೀಯ ವೇಗಿ ಬೌನ್ಸರ್‌ಗಳ ಸುರಿಮಳೆಗೈದ ನಂತರ ಆಂಡರ್ಸನ್ ಬುಮ್ರಾ ಜೊತೆ ಅನಿಮೇಟೆಡ್ ಚಾಟ್ ಮಾಡುತ್ತಿರುವುದು ಕಂಡುಬಂದಿತು. ಆ ನಂತರ, ಉದ್ವೇಗ ಭುಗಿಲೆದ್ದಿತು. ಎರಡೂ ತಂಡಗಳು ಆಟದ ಉದ್ದಕ್ಕೂ ಮಾತಿನ ಚಕಮಿಕಿಯಲ್ಲಿ ತೊಡಗಿದವು.

ನಾನು ಕೊನೆಯಲ್ಲಿ ಕೋಪಗೊಂಡಿದ್ದೆ. ನಾನು ಏನನ್ನಾದರೂ ಹೇಳಬೇಕು ಎಂದು ಭಾವಿಸಿದೆ. ಹಾಗೆ ಮಾಡಿದ್ದಕ್ಕಾಗಿ ನನಗೆ ಕೆಟ್ಟ ಭಾವನೆ ಉಂಟಾಯಿತು. ನಾನು ಕ್ಷಮೆಯಾಚಿಸುತ್ತೇನೆ. ಇಂತಹ ಘಟನೆಗಳು ಕೆಲವೊಮ್ಮೆ ಸಂಭವಿಸುತ್ತದೆ ಎಂದು ಆಂಡರ್ಸನ್ ಟೆಲಿಗ್ರಾಫ್ಗಾಗಿ ತನ್ನ ಅಂಕಣದಲ್ಲಿ ಬರೆದಿದ್ದಾರೆ.

ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಭಾರತವು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಎರಡನೇ ಪಂದ್ಯವನ್ನು ಗೆದ್ದು ಬೀಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com