3ನೇ ಟೆಸ್ಟ್: ದಿನಾಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 120 ರನ್ ಗಳಿಕೆ; 42 ರನ್ ಗಳ ಮುನ್ನಡೆ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ  ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ ದಿನಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿದೆ. 
ಭಾರತ-ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯ
ಭಾರತ-ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯ

ಹೆಡಿಂಗ್ಲೆ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ  ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ ದಿನಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿದೆ. 

ಈ ಮೂಲಕ ಆತಿಥೇಯ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ವಿರುದ್ಧ 42 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಲೀಡ್ಸ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 78 ರನ್ ಗಳ ಅತ್ಯಲ್ಪ ಮೊತ್ತಕ್ಕೆ ಸರ್ವಪತನ ಕಂಡಿತು.

ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ಬೌಲಿಂಗ್ ನ್ನು ಎದುರಿಸು ಬೃಹತ್ ಮೊತ್ತ ದಾಖಲಿಸಲು ಭಾರತ ತಂಡ ವಿಫಲವಾಯಿತು.

ಭಾರತದ ಅತ್ಯಲ್ಪ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಯಾವುದೇ ವಿಕೆಟ್ ನಷ್ಟ ವಿಲ್ಲದೇ ದಿನಾತ್ಯಕ್ಕೆ 120 ರನ್ ಗಳನ್ನು ಗಳಿಸಿ ಭಾರತದ ವಿರುದ್ಧ 42 ರನ್ ಗಳ ಮುನ್ನಡೆ ಸಾಧಿಸಿದೆ. ಹಸೀಬ್ ಹಮೀದ್ 130 ಎಸೆತಗಳಿಗೆ 60 ರನ್ ಗಳನ್ನು ಗಳಿಸಿದರೆ, ರೋರಿ ಜೋಸೆಫ್ ಬರ್ನ್ಸ್ 125 ರನ್ ಗಳಿಗೆ 52 ರನ್ ಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com