ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್: ರೆಹಾನೆ, ಇಶಾಂತ್, ಜಡೇಜಾ ಅಲಭ್ಯ
ಮುಂಬೈ ನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್- ಭಾರತ ನಡುವಿನ 2 ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರೆಹಾನೆ ಹಾಗೂ ಇಶಾಂತ್ ಶರ್ಮ ಅಲಭ್ಯರಾಗಿದ್ದಾರೆ.
Published: 03rd December 2021 11:22 AM | Last Updated: 03rd December 2021 02:16 PM | A+A A-

ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಇಶಾಂತ್ ಶರ್ಮ
ಮುಂಬೈ: ಮುಂಬೈ ನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್- ಭಾರತ ನಡುವಿನ 2 ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರೆಹಾನೆ ಹಾಗೂ ಇಶಾಂತ್ ಶರ್ಮ ಅಲಭ್ಯರಾಗಿದ್ದಾರೆ.
ಡಿ.03 ರಂದು 2 ನೇ ಟೆಸ್ಟ್ ಪಂದ್ಯ ನಡೆಯಲಿದ್ದು ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಇಶಾಂತ್ ಶರ್ಮಾ ಎಡಗೈ ಕಿರುಬೆರಳು ಗಾಯಗೊಂಡಿದ್ದರ ಪರಿಣಾಮವಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದರೆ ಆಲ್ ರೌಂಡರ್ ಜಡೇಜಾ ಅವರ ಬಲ ಮುಂಗೈಗೆ ಪೆಟ್ಟು ಬಿದ್ದಿದ್ದರೆ ಪರಿಣಾಮವಾಗಿ ಆಡುವುದಕ್ಕೆ ಸಾಧ್ಯವಾಗುತ್ತಿಲ್ಲ" ಇಬ್ಬರ ಆರೋಗ್ಯದ ಮೇಲೆ ಬಿಸಿಸಿಐ ನ ವೈದ್ಯಕೀಯ ತಂಡ ನಿಗಾ ವಹಿಸಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ತಂಡದಲ್ಲಿ ತಮ್ಮ ಕ್ರಮಾಂಕ, ಸ್ಥಾನದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎದುರಿಸುತ್ತಿದ್ದ ಉಪನಾಯಕ ಅಜಿಂಕ್ಯಾ ರೆಹಾನೆಗೆ ಮಂಡಿರಜ್ಜು ಒತ್ತಡ ಉಂಟಾಗಿದ್ದು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರೂ ಸಹ ಈ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಬೇಕಿದೆ.