ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಜೇಮ್ಸ್ ಆಂಡರ್ಸನ್ ದಾಖಲೆ ಸೃಷ್ಟಿ; ಆದರೆ ಬೌಲಿಂಗ್ ನಲ್ಲಂತು ಅಲ್ಲ!

ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಇವರು ಬೌಲಿಂಗ್ ನಲ್ಲಿ ದಾಖಲೆ ಮಾಡಿಲ್ಲ. ಇವರು ದಾಖಲೆ ಮಾಡಿದ್ದು ಬ್ಯಾಟಿಂಗ್ ವಿಭಾಗದಲ್ಲಿ. 
ಜೇಮ್ಸ್ ಆಂಡರ್ಸನ್
ಜೇಮ್ಸ್ ಆಂಡರ್ಸನ್

ಅಡಿಲೇಡ್: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಇವರು ಬೌಲಿಂಗ್ ನಲ್ಲಿ ದಾಖಲೆ ಮಾಡಿಲ್ಲ. ಇವರು ದಾಖಲೆ ಮಾಡಿದ್ದು ಬ್ಯಾಟಿಂಗ್ ವಿಭಾಗದಲ್ಲಿ. 

ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಔಟಾಗದೆ ಉಳಿಯುವ ಮೂಲಕ ದಾಖಲೆ ಮಾಡಿದ್ದಾರೆ. ಅವರಿಗಿಂತ ಮೊದಲು ಯಾವುದೇ ಆಟಗಾರ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬಾರಿ ನಾಟ್ ಔಟ್ ಆಗಿ ಉಳಿದಿಲ್ಲ.

167ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಆಂಡರ್ಸನ್ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಎರಡನೇ ಆಶಸ್ ಪಂದ್ಯದ ವೇಳೆ ಆಂಡರ್ಸನ್ ಈ ಐತಿಹಾಸಿಕ ಸಾಧನೆ ಮಾಡಿದರು. ಅಡಿಲೇಡ್ ಟೆಸ್ಟ್‌ನಲ್ಲಿ ಇಂಗ್ಲಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜೇಮ್ಸ್ ಆಂಡರ್ಸನ್ 13 ಎಸೆತಗಳಲ್ಲಿ 5 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಟಾಪ್-5ರಲ್ಲಿ ಭಾರತೀಯರ ಹೆಸರಿಲ್ಲ
ಆಂಡರ್ಸನ್ ನಂತರ ಟೆಸ್ಟ್‌ಗಳಲ್ಲಿ ಹೆಚ್ಚು ಅಜೇಯರಾಗಿ ಉಳಿದಿರುವ ಎರಡನೇ ಆಟಗಾರನ ಹೆಸರು ವೆಸ್ಟ್ ಇಂಡೀಸ್ ಮಾಜಿ ದಂತಕಥೆ ಕರ್ಟ್ನಿ ವಾಲ್ಸ್ . ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ವಾಲ್ಸ್ 61 ಬಾರಿ ಅಜೇಯರಾಗಿ ಉಳಿದಿದ್ದಾರೆ. ಬಳಿಕ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (56) ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಬಾಬ್ ವಿಲ್ಸ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 55 ಬಾರಿ ಅಜೇಯರಾಗಿದ್ದವರು. ನ್ಯೂಜಿಲೆಂಡ್‌ನ ಕ್ರಿಸ್ ಮಾರ್ಟಿನ್ (52) ಹೆಸರು 5 ನೇ ಸ್ಥಾನದಲ್ಲಿದೆ. ಅಗ್ರ-5ರಲ್ಲಿ ಒಬ್ಬ ಭಾರತೀಯ ಆಟಗಾರನೂ ಇಲ್ಲ. ಇಶಾಂತ್ ಶರ್ಮಾ ಅವರ ಹೆಸರು 8 ನೇ ಸ್ಥಾನದಲ್ಲಿದೆ, ಅವರು 47 ಬಾರಿ ಔಟಾಗದೆ ಉಳಿದಿದ್ದಾರೆ.

ವೇಗದ ಬೌಲರ್ ಆಗಿ ಆಂಡರ್ಸನ್ ಖ್ಯಾತಿ!
ಇದುವರೆಗೆ ಜೇಮ್ಸ್ ಆಂಡರ್ಸನ್ 167 ಟೆಸ್ಟ್ ಪಂದ್ಯಗಳಲ್ಲಿ 635 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇವರಿಗಿಂತ ಮೊದಲು ಮೂವರು ಸ್ಪಿನ್ನರ್ ಗಳು ಅತಿ ಹೆಚ್ಚು ವಿಕೆಟ್ ಕಿತ್ತಿರುವ ಹೆಸರು ಮಾಡಿದ್ದಾರೆ. ಆದ್ದರಿಂದ ವೇಗದ ಬೌಲಿಂಗ್ ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರಲ್ಲಿ ಆಂಡರ್ಸನ್ ಹೆಸರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

2ನೇ ಆಶಿಸ್ ಟೆಸ್ಟ್ ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ
ಆಸ್ಟ್ರೇಲಿಯಾದ 9 ವಿಕೆಟ್‌ಗೆ 473 ರನ್‌ಗಳಿಗೆ ಉತ್ತರವಾಗಿ, ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಕೇವಲ 236 ರನ್‌ಗಳಿಗೆ ಕುಸಿಯಿತು. ನಾಲ್ಕನೇ ದಿನದ ಹೊತ್ತಿಗೆ ಆಸ್ಟ್ರೇಲಿಯದ ಒಟ್ಟು ಮುನ್ನಡೆ 400ಕ್ಕೂ ಹೆಚ್ಚು ರನ್ ಆಗಿದೆ. ಸದ್ಯ ಪಂದ್ಯದಲ್ಲಿ ಇಂಗ್ಲೆಂಡ್ ಹಿಂದುಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com