ಚೆನ್ನೈ ಟೆಸ್ಟ್: ಮತ್ತೆ ಎಡವಿದ ರೋಹಿತ್, ದಾಖಲೆಯ ರನ್ ಚೇಸಿಂಗ್​ನಲ್ಲಿ ಚೀಪಾಗಿ ಔಟಾದ ಹಿಟ್ ಮ್ಯಾನ್!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದಿರುವ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೇಡ್ ಆಟಗಾರರನ್ನು ಕೇವಲ 178 ರನ್ ಗಳಿಗೆ ಆಲೌಟ್ ಮಾಡಿದೆ. ಇನ್ನು 420 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಮೊದಲ ಆಘಾತ ಎದುರಾಗಿದ್ದು ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮತ್ತೆ ಎಡವಿದ್ದಾರೆ.

Published: 08th February 2021 07:24 PM  |   Last Updated: 08th February 2021 07:24 PM   |  A+A-


Rohit Sharma

ರೋಹಿತ್ ಶರ್ಮಾ

Posted By : Vishwanath S
Source : PTI

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದಿರುವ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೇಡ್ ಆಟಗಾರರನ್ನು ಕೇವಲ 178 ರನ್ ಗಳಿಗೆ ಆಲೌಟ್ ಮಾಡಿದೆ. ಇನ್ನು 420 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಮೊದಲ ಆಘಾತ ಎದುರಾಗಿದ್ದು ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮತ್ತೆ ಎಡವಿದ್ದಾರೆ. 

ನಾಲ್ಕನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 39 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಶುಭ್ನಮ್ ಗಿಲ್ ಅಜೇಯ 15 ಮತ್ತು ಚೇತೇಶ್ವರ ಪೂಜಾರ ಅಜೇಯ 12 ರನ್ ಪೇರಿಸಿ ಐದನೇ ದಿನದಾಟವನ್ನು ಆರಂಭಿಸಲಿದ್ದಾರೆ. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ 12 ರನ್ ಗಳಿಸಿದ್ದಾಗ ಲಿಚ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಪಡೆಗೆ ಪ್ರವಾಸಿ ತಂಡ 420 ರನ್ ಗಳ ಗುರಿಯನ್ನು ನೀಡಿದೆ. ಸೋಮವಾರ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಮುಂದುವರಿಸಿ, 337 ರನ್ ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ಹೇರದೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 178 ರನ್ ಗಳಿಗೆ ಆಲೌಟ್ ಆಯಿತು. 

ಭಾರತದ ಪರ ರವಿಚಂದ್ರನ್ ಅಶ್ವಿನ್ 31 ರನ್ ಗಳಿಗೆ ಔಟ್ ಆದರು. 91 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ವಾಶಿಂಗ್ಟನ್ ಸುಂದರ್ 138 ಎಸೆತಗಳಲ್ಲಿ 85 ರನ್ ಬಾರಿಸಿ ಅಜೇಯರಾಗುಳಿದರು. 

ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆರಂಭಿಕ ರೋರಿ ಬರ್ನ್ಸ್ ಮೊದಲ ಎಸೆತದಲ್ಲೇ ಔಟ್ ಆದರು. ಆರಂಭಿಕ ಡಾಮ್ ಸಿಬ್ಲೆ 16 ಹಾಗೂ ಡಾನ್ 18 ರನ್ ಬಾರಿಸಿದರು. 

ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ನಾಯಕ ಜೋ ರೂಟ್ 32 ಎಸೆತಗಳಲ್ಲಿ 40 ರನ್ ಬಾರಿಸಿ ಔಟ್ ಆದರು. ಆಲ್ ರೌಂಡರ್ ಬೆನ್ ಸ್ಟೋಕ್ಸ್ 7, ಓಲಿ ಪೋಪ್ 28, ಜಾಸ್ ಬಟ್ಲರ್ 24. ಡಾಮ್ ಬೆಸ್ 25 ರನ್ ಬಾರಿಸಿದರು, ಕೆಳ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. 

ಭಾರತದ ಪರ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ 61 ರನ್ ನೀಡಿ 6 ವಿಕೆಟ್ ಪಡೆದು ಬೀಗಿದರು. ಶಹಬಾದ್ ನದೀಮ್ , ಇಶಾಂತ್ ಶರ್ಮಾ 1 ವಿಕೆಟ್ ಉರುಳಿಸಿದರು.

Stay up to date on all the latest ಕ್ರಿಕೆಟ್ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp