ಭಾರತ- ಇಂಗ್ಲೆಂಡ್ 2ನೇ ಟೆಸ್ಟ್: ರೋಹಿತ್ ಶರ್ಮಾ ಅದ್ಬುತ ಹೊಡೆತಕ್ಕೆ ಕೊಹ್ಲಿ, ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ

ಬಹುತೇಕ ಒಂದು ವರ್ಷದ ನಂತರ ಅಭಿಮಾನಿಗಳು, ಭಾರತೀಯ ಕ್ರಿಕೆಟ್ ಸ್ಟೇಡಿಯಂಗೆ ಮರಳಿದ್ದು, ಇಲ್ಲಿನ ಎಂಎ ಚಿದಂಬರಂ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮೊದಲ ದಿನ ಅದ್ಬುತ ಹೊಡೆತದ ಮೂಲಕ ರೋಹಿತ್ ಶರ್ಮಾ ಅಭಿಮಾನಿಗಳನ್ನು ರಂಜಿಸಿದ್ದಾರೆ.

Published: 13th February 2021 03:39 PM  |   Last Updated: 13th February 2021 04:01 PM   |  A+A-


Skipper_Virat_Kohli_was_also_pleased_with_the_impeccable_timing_of_Rohits_shot1

ರೋಹಿತ್ ಶರ್ಮಾ ಅವರ ಹೊಡೆತಗಳಿಗೆ ಡ್ರಸ್ಸಿಂಗ್ ರೂಮ್ ನಲ್ಲಿ ಖುಷಿಪಡುತ್ತಿರುವ ನಾಯಕ ಕೊಹ್ಲಿ

Posted By : Nagaraja AB
Source : The New Indian Express

ಚೆನ್ನೈ: ಬಹುತೇಕ ಒಂದು ವರ್ಷದ ನಂತರ ಅಭಿಮಾನಿಗಳು, ಭಾರತೀಯ ಕ್ರಿಕೆಟ್ ಸ್ಟೇಡಿಯಂಗೆ ಮರಳಿದ್ದು, ಇಲ್ಲಿನ ಎಂಎ ಚಿದಂಬರಂ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮೊದಲ ದಿನ ಅದ್ಬುತ ಹೊಡೆತದ ಮೂಲಕ ರೋಹಿತ್ ಶರ್ಮಾ ಅಭಿಮಾನಿಗಳನ್ನು ರಂಜಿಸಿದ್ದಾರೆ.

ದಿನದ ಮೂರನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್  ಅವರ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಅವರ ಸೊಗಸಾದ ಹೊಡೆತಕ್ಕೆ ಅಭಿಮಾನಿಗಳು ಪಿಧಾ ಆಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಡ್ರೆಸ್ಸಿಂಗ್ ರೋಮ್ ನಲ್ಲಿಯೇ ರೋಹಿತ್  ಶರ್ಮಾರ ಹೊಡೆತಗಳಿಗೆ ಸಂತೋಷಪಟ್ಟಿದ್ದಾರೆ. ಅವರನ್ನು ಅಭಿನಂದಿಸುತ್ತಿರುವ ದೃಶ್ಯ ಕಂಡುಬಂದಿತು.

ರೋಹಿತ್ ಶರ್ಮಾ ಅವರ ಸೊಗಸಾದ ಹೊಡೆತಗಳಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆಪಾಕ್ ನಲ್ಲಿದ್ದ ಅಭಿಮಾನಿಗಳಿಂದ 
ಅಭಿನಂದನೆಗಳ ಸುರಿಮಳೆ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದೆ. 

 

ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ   ಶುಭ್ಮನ್ ಗಿಲ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತ್ತು. ಚೇತೇಶ್ವರ ಪೂಜಾರ 21 ರನ್ ಗಳಿಸಿ ಔಟಾದರೆ, ಬಳಿಕ ಕ್ರೀಸ್ ಗೆ ಬಂದ ನಾಯಕ ಕೊಹ್ಲಿ, ಮೋಯಿನ್ ಅಲಿ ಅವರ ಸ್ಪಿನ್ ಬಲೆಗೆ ಬಿದ್ದರು. ಭೋಜನ ವಿರಾಮದ ವೇಳೆಗೆ ಭಾರತ 51 ಓವರ್ ಗಳಿಗೆ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತು.


ಇಂದಿನ ಪಂದ್ಯದಲ್ಲಿ ಶಹಬಾಜ್ ನದೀಂ, ವಾಷಿಂಗ್ಟನ್ ಸುಂದರ್ ಮತ್ತು ಜಸ್ಪ್ರೀತ್ ಬೂಮ್ರಾ ಅವರ ಬದಲಿಗೆ ಅಕ್ಷರ ಪಟೇಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಆಟವಾಡುತ್ತಿದ್ದಾರೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp