ಐಪಿಎಲ್-2021 ಹರಾಜು: 5.25 ಕೋಟಿಗೆ ಶಾರೂಖ್ ಖಾನ್ ನ್ನು ಖರೀದಿಸಿದ ಪ್ರೀತಿ ಝಿಂಟಾ!
ಐಪಿಎಲ್-2021 ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪಂಜಾಬ್ ಕಿಂಗ್ಸ್ XI ತಂಡದ ಮಾಲಿಕರಾದ ಪ್ರೀತಿ ಝಿಂಟಾ 5.25 ಕೋಟಿ ರೂಪಾಯಿಗಳಿಗೆ ಶಾರೂಖ್ ಖಾನ್ ನ್ನು ಖರೀದಿಸಿದ್ದಾರೆ!!
Published: 18th February 2021 07:51 PM | Last Updated: 18th February 2021 07:51 PM | A+A A-

ಪ್ರೀತಿ ಝಿಂಟಾ
ಐಪಿಎಲ್-2021 ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪಂಜಾಬ್ ಕಿಂಗ್ಸ್ XI ತಂಡದ ಮಾಲಿಕರಾದ ಪ್ರೀತಿ ಝಿಂಟಾ 5.25 ಕೋಟಿ ರೂಪಾಯಿಗಳಿಗೆ ಶಾರೂಖ್ ಖಾನ್ ನ್ನು ಖರೀದಿಸಿದ್ದಾರೆ!!
ಐಪಿಎಲ್ ನ ಸೀಸನ್ 14 ರ ಹರಾಜು ಪ್ರಕ್ರಿಯೆಯಲ್ಲಿ ಶಾರೂಖ್ ಖಾನ್ 20 ಲಕ್ಷದ ಮೂಲ ಬೆಲೆಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ದೆಹಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪೈಪೋಟಿಗೆ ಬಿದ್ದು 5.25 ಕೋಟಿ ವರೆಗೂ ಬಿಕರಿ ಮೊತ್ತವನ್ನು ಏರಿಕೆ ಮಾಡಿದವು. ಕೊನೆಯದಾಗಿ 5.25 ಕೋಟಿ ರೂಪಾಯಿಗಳಿಗೆ ಪಂಜಾಬ್ ತಂಡ ಶಾರೂಖ್ ಖಾನ್ ನ್ನು ಖರೀದಿಸಿದೆ.
ಶಾರೂಖ್ ಖಾನ್ ತಮಿಳುನಾಡಿನ ಆಲ್ ರೌಂಡರ್ ಕ್ರಿಕೆಟಿಗರಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲಿಕರು ಹಾಗೂ ಈ ಕ್ರಿಕೆಟಿಗನ ಹೆಸರು ಒಂದೇ ಆಗಿದ್ದರಿಂದ ಕೆಕೆಆರ್ ಕ್ಯಾಂಪ್ ನಲ್ಲಿ ಅಚ್ಚರಿ ಮೂಡಿದ್ದು ವಿಶೇಷವಾಗಿತ್ತು.
When you get a certain "Shahrukh Khan" in your side@PunjabKingsIPL @Vivo_India #IPLAuction pic.twitter.com/z4te9w2EIZ
— IndianPremierLeague (@IPL) February 18, 2021
ಪಂಜಾಬ್ ತಂಡಕ್ಕೆ ಶಾರೂಖ್ ಖಾನ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಂಡದ ಸಹ ಮಾಲಿಕರಾದ ಪ್ರೀತಿ ಝಿಂಟಾ, ಹಾಸ್ಯ ಚಟಾಕಿ ಹಾರಿಸಿದ್ದು, ಹರಾಜು ಪ್ರಕ್ರಿಯೆಯ ಟೇಬಲ್ ಬಡಿದು ನಾವು ಶಾರೂಖ್ ಖಾನ್ ನ್ನು ಖರೀದಿಸಿದ್ದೇವೆ ಎಂದು ಕೆಕೆಆರ್ ಟೇಬಲ್ ನತ್ತ ಕೂಗಿ ಹೇಳಿದರು.
ಇತ್ತ ಸಿಎಸ್ ಕೆ ಮೊಯೀನ್ ಅಲಿ ಯನ್ನು ಖರೀದಿಸಿದಂತೆಯೇ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು 9.25 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.
ಗೌತಮ್ ಗೆ ಕೆಕೆಆರ್ ಬಿಡ್ಡಿಂಗ್ ಪ್ರಾರಂಭಿಸಿತ್ತು. ನಂತರ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ ಹೆಚ್) ಸೇರ್ಪಡೆಗೊಂಡಿತು. ಅಂತಿಮವಾಗಿ ಸಿಎಸ್ ಕೆ ಗೌತಮ್ ನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.