ವೀಸಾ ನೀಡಿ ಇಲ್ಲದಿದ್ದರೆ ಭಾರತದಿಂದ ಟಿ20 ವಿಶ್ವಕಪ್ ಸ್ಥಳಾಂತರದ ಬೆದರಿಕೆಯೊಡ್ಡಿದ ಪಿಸಿಬಿ ಮುಖ್ಯಸ್ಥ!
ಈ ಬಾರಿ ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತ ವೀಸಾ ನೀಡಿದಿದ್ದರೆ ಟೂರ್ನಿಯನ್ನು ಸ್ಥಳಾಂತರಿಸಲು ಮನವಿ ಸಲ್ಲಿಸಲಾಗುವುದು ಎಂದು ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮನಿ ಹೇಳಿದ್ದಾರೆ.
Published: 21st February 2021 07:27 PM | Last Updated: 22nd February 2021 05:07 PM | A+A A-

ಎಹ್ಸಾನ್ ಮಣಿ
ಇಸ್ಲಾಮಾಬಾದ್: ಈ ಬಾರಿ ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತ ವೀಸಾ ನೀಡಿದಿದ್ದರೆ ಟೂರ್ನಿಯನ್ನು ಸ್ಥಳಾಂತರಿಸಲು ಮನವಿ ಸಲ್ಲಿಸಲಾಗುವುದು ಎಂದು ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮನಿ ಹೇಳಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಆಡಬಾರದು ಎಂದು ನಮ್ಮ ಸರ್ಕಾರ ಸೂಚಿಸಿಲ್ಲ. ಐಸಿಸಿಯ ನಿರ್ಧಾರಕ್ಕೆ ಬಗ್ಗೆ ನಮ್ಮ ಚಕಾರವಿಲ್ಲ. ಐಸಿಸಿ ಮಟ್ಟದಲ್ಲಿ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ ನಾವು ಭಾರತ ಸರ್ಕಾರದಿಂದ ವೀಸಾ ನೀಡುವ ಬಗ್ಗೆ ಲಿಖಿತ ಒಪ್ಪಿಗೆ ಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನಿಯರಿಗೆ ವೀಸಾ ನೀಡುವ ಬಗ್ಗೆ ಎಷ್ಟು ಕೇಳಿದರೂ ಭಾರತ ಸೂಕ್ತ ಉತ್ತರ ನೀಡುತ್ತಿಲ್ಲ. ನಾವು ಬರೀ ಆಟಗಾರರಿಗಷ್ಟೇ ವೀಸಾ ಕೇಳುತ್ತಿಲ್ಲ. ನಮ್ಮ ದೇಶದ ಅಭಿಮಾನಿಗಳಿಗೆ, ಪತ್ರಕರ್ತರಿಗೆ ಮತ್ತು ಅಧಿಕಾರಿಗಳಿಗೂ ವೀಸಾ ಒದಗಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಎಹ್ಸಾನ್ ಮಣಿ ಹೇಳಿದ್ದಾರೆ.
ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ನಮಗೆ ವೀಸಾ ಕುರಿತ ಲಿಖಿತ ಉತ್ತರ ನೀಡಬೇಕು. ಇಲ್ಲದಿದ್ದರೆ ಭಾರತದಲ್ಲಿ ನಡೆಯಬೇಕಾದ ಟೂರ್ನಿ ಯುಎಇಯಲ್ಲಿ ನಡೆಸುವಂತೆ ನಾವು ಐಸಿಸಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.