
ಟೀಂ ಇಂಡಿಯಾ
ಅಹಮದಾಬಾದ್: ಗೆಲುವಿನ ನಾಗಾಲೋಟದಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ, ಬುಧವಾರ ನಡೆಯುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವುದರಿಂದ ರೋಚಕತೆ ಹೆಚ್ಚಿದೆ. ಮೂರನೇ ಪಂದ್ಯವನ್ನುಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದು ಕೊಳ್ಳಲು ಟೀಮ್ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾಗೆ ಮೂರು ಹಗಲು-ರಾತ್ರಿ ಟೆಸ್ಟ್ ಆಡಿರುವ ಅನುಭವವಿದೆ. ಇಂಗ್ಲೆಂಡ್ ಸಹ ಹಗಲು ರಾತ್ರಿ ಟೆಸ್ಟ್ ಆಡಿದೆ.
ಎರಡನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ವಿರಾಟ್ ಪಡೆಯ ಮೇಲೆ ಭರವಸೆ ಹೆಚ್ಚಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲವಾಗಿದ್ದು, ಎದುರಾಳಿಯನ್ನು ಕಟ್ಟಿಹಾಕಲಾಗಿದೆ. ಆರಂಭಿಕರಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ತಂಡಕ್ಕೆ ಉತ್ತಮ ಜೊತೆಯಾಟವನ್ನು ನೀಡಬೇಕಿದೆ.
ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರಾದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಹಾಗೂ ಅಜಿಂಕ್ಯಾ ರಹಾನೆ ತಮ್ಮ ಮೇಲೆ ತಂಡದ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ವಿರಾಟ್ ಕೊಹ್ಲಿ ರನ್ ಹಾಕುತ್ತಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ವಿಕೆಟ್ ಕೀಪರ್ ರಿಷಬ್ ಪಂತ್ ತಮ್ಮ ಅನುಭವವನ್ನು ಧಾರೆ ಎರೆದು ಆಡಬೇಕಿದೆ. ವಿಕೆಟ್ ಕೀಪಿಂಗ್ ನಲ್ಲಿನ ನ್ಯೂನ್ಯತೆಗಳನ್ನು ಮೆಟ್ಟಿನಿಲ್ಲ ಬೇಕಿದೆ.
ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಬೌಲಿಂಗ್ ನೊಗ ಹೊರಲಿದ್ದಾರೆ. ನೂರನೇ ಪಂದ್ಯವನ್ನು ಆಡುತ್ತಿರುವ ಇಶಾಂತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಶ್ವಿನ್ ತಮ್ಮ ಕಮಾಲ ಸ್ಪಿನ್ ಬೌಲಿಂಗ್ ಮುಂದುವರಿಸಿ ಗೆಲುವಿನಲ್ಲಿ ಮಿಂಚಬೇಕಿದೆ. ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಶಿಂಗ್ಟನ್ ಸುಂದರ್ ನಡುವೆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯಲಿದೆ.
ಪ್ರವಾಸಿ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು, ಗೆಲುವಿಗೆ ಯೋಜನೆಯನ್ನು ಹಾಕಿಕೊಂಡಿದೆ. ರೋರಿ ಬರ್ನ್ಸ್, ಸೀಬ್ಲೆ, ಓಲಿ ಪೋಪ್, ಬೆನ್ ಸ್ಟೋಕ್ಸ್ ತಂಡಕ್ಕೆ ನೆರವಾಗಬೇಕಿದೆ. ಜೋ ರೂಟ್ ರನ್ ಕಲೆ ಹಾಕ ಬೇಕಿದೆ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಗಳು ತಮ್ಮ ಶಿಸ್ತು ಬದ್ಧ ದಾಳಿಯಿಂದ ಭಾರತದ ತಂಡಗಳನ್ನು ಕಾಡಬೇಕಿದೆ.