
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಉಚಿತ ಕ್ರಿಕೆಟ್ ಸೆಷನ್ ಗಳನ್ನು ಪ್ರಾರಂಭಿಸುವುದಕ್ಕಾಗಿ ಘೋಷಿಸಿದ್ದಾರೆ.
Unacademyಯ ವೇದಿಕೆ ಮೂಲಕ ಸಚಿನ್ ತೆಂಡೂಲ್ಕರ್ ನೇರ ಪ್ರಸಾರದ ಸಂವಾದ ತರಗತಿಗಳನ್ನು ನಡೆಸಲಿದ್ದು, ಕ್ರಿಕೆಟ್ ಕುರಿತು ಆಸಕ್ತಿ ಹೊಂದಿರುವ ಯುವ ಪೀಳಿಗೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಂವಹನ ನಡೆಸಿ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಕ್ರಿಕೆಟ್ ಆಸಕ್ತರು ಶುಲ್ಕ ರಹಿತವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಲರ್ನಿಂಗ್ ವೇದಿಕೆಯಾಗಿರುವ Unacademy ಈ ಸೆಷನ್ ಗಳನ್ನು ನಡೆಸುವುದಕ್ಕೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
"ನಾನು ಕ್ರಿಕೆಟ್ ಕಲಿಕೆಗೆ ಸಂಬಂಧಿಸಿದಂತೆ ಉಚಿತ ಆನ್ ಲೈನ್ ಸೆಷನ್ ಗಳನ್ನು ನಡೆಸುತ್ತೇನೆ, ಆಸಕ್ತಿ ಹೊಂದಿರುವ ಯಾರು ಬೇಕಾದರೂ ಭಾಗವಹಿಸಬಹುದು, ಈ ವರೆಗೂ ನಾನು ಭೌತಿಕವಾಗಿ ವಿದ್ಯಾರ್ಥಿಗಳು, ಯುವಜನತೆಯೊಂದಿಗೆ ಸಂವಹನ ನಡೆಸಿದ್ದೇನೆ ಆದರೆ ಡಿಜಿಟಲ್ ಸಂವಹನ ಇದೇ ಮೊದಲಬಾರಿಯಾಗಿದೆ. ಲಕ್ಷಾಂತರ ಜನರನ್ನು ಏಕಕಾಲಕ್ಕೆ ತಲುಪುವುದಕ್ಕೆ ಸಾಧ್ಯವಾಗಲಿದೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.