3ನೇ ಟೆಸ್ಟ್: ರೋಹಿತ್ ಶರ್ಮಾ ಅರ್ಧಶತಕ, ಭಾರತ 99/3 

ಅಹ್ಮದಾಬಾದ್ ನ  ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಹೊನಲು-ಬೆಳಕಿನ 3 ನೇ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಭಾರತ ಪರ "ಹಿಟ್ ಮ್ಯಾನ್" ರೋಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ( 57*)ಸಿಡಿಸಿದ್ದಾರೆ. 

Published: 24th February 2021 10:24 PM  |   Last Updated: 25th February 2021 12:30 PM   |  A+A-


ರೋಹಿತ್ ಶರ್ಮಾ

Posted By : Raghavendra Adiga
Source : ANI

ಅಹ್ಮದಾಬಾದ್: ಅಹ್ಮದಾಬಾದ್ ನ  ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಹೊನಲು-ಬೆಳಕಿನ 3ನೇ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಭಾರತ ಪರ "ಹಿಟ್ ಮ್ಯಾನ್" ರೋಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ( 57*) ಸಿಡಿಸಿದ್ದಾರೆ. 

ಸಧ್ಯ ರೋಹಿತ್ ಶರ್ಮಾ ಜತೆಗೆ ಮೂರು ಬಾಲ್ ಗೆ ಒಂದು ರನ್ ಗಳಿಸಿರುವ ಅಜಿಂಕ್ಯ ರಹಾನೆ ಕಣದಲ್ಲಿದ್ದಾರೆ.

ಇಂಗ್ಲೇಂಡ್ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ಆಲೌಟ್ ಆದ ನಂತರ ಬ್ಯಾಟಿಂಗ್ ಪ್ರಾರಂಭಿಸಿದ  ಭಾರತ ಪ್ರಾರಂಭದಲ್ಲೇ ಶುಭ್‌ಮನ್ ಗಿಲ್ ಹಾಗೂ ಪೂಜಾರಾ ವಿಕೆಟ್ ಕಳೆದುಕೊಂಡಿತ್ತು.

ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದವರು 27 ರನ್ ಗಳಿಸಿದ್ದಾಗ ಲೀಚ್ ಎಸೆತಕ್ಕೆ ಔಟಾಗಿದ್ದಾರೆ.

ದಿನದಂತ್ಯದಲ್ಲಿ ಭಾರತ 13 ರನ್ ಗಳ ಅಲ್ಪ ಹಿನ್ನಡೆ ಅನುಭವಿಸಿದೆ.

 

Stay up to date on all the latest ಕ್ರಿಕೆಟ್ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp