ಭಾರತ-ಇಂಗ್ಲೆಂಡ್ ಟೆಸ್ಟ್: ಮೂರನೇ ಅಂಪೈರ್ ಆತುರದ ನಿರ್ಧಾರದ ಬಗ್ಗೆ ಮ್ಯಾಚ್ ರೆಫರಿ ಎದುರು ಇಂಗ್ಲೆಂಡ್ ಅಸಮಾಧಾನ!

ಭಾರತ- ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ಆತುರದ ನಿರ್ಧಾರಗಳ ಬಗ್ಗೆ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್ ವುಡ್, ನಾಯಕ ಜೋ ರೂಟ್ ಅಸಮಾಧಾನ ವ್ಯಕ್ತಪಡಿಸಿ ವಿಷಯವನ್ನು ಐಸಿಸಿ ಮ್ಯಾಚ್ ರೆಫರಿ ಎದುರು ಕೊಂಡೊಯ್ದಿದ್ದಾರೆ. 

Published: 25th February 2021 01:31 PM  |   Last Updated: 25th February 2021 01:36 PM   |  A+A-


India vs England: Visitors ask match referee for 'consistency' in third umpire calls

ಭಾರತ-ಇಂಗ್ಲೆಂಡ್ ಟೆಸ್ಟ್: ಮೂರನೇ ಅಂಪೈರ್ ಆತುರದ ನಿರ್ಧಾರದ ಬಗ್ಗೆ ಮ್ಯಾಚ್ ರೆಫರಿ ಎದುರು ಇಂಗ್ಲೆಂಡ್ ಅಸಮಾಧನ!

Posted By : Srinivas Rao BV
Source : The New Indian Express

ಅಹ್ಮದಾಬಾದ್: ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ಆತುರದ ನಿರ್ಧಾರಗಳ ಬಗ್ಗೆ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್ ವುಡ್, ನಾಯಕ ಜೋ ರೂಟ್ ಅಸಮಾಧಾನ ವ್ಯಕ್ತಪಡಿಸಿ ವಿಷಯವನ್ನು ಐಸಿಸಿ ಮ್ಯಾಚ್ ರೆಫರಿ ಎದುರು ಕೊಂಡೊಯ್ದಿದ್ದಾರೆ. 

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೊನಲು-ಬೆಳಕಿನ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ತೀರ್ಪು ನೀಡುವಾಗ ಮೂರನೇ ಅಂಪೈರ್ ಆತುರದ ನಿರ್ಧಾರಗಳನ್ನು ಕೈಗೊಂಡರು. ಪರಿಣಾಮ ಆಥಿತೇಯರ ಪರವಾದ ತೀರ್ಪುಗಳು ಪ್ರಕಟಗೊಂಡವು, ಮೂರನೇ ಅಂಪೈರ್ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಸ್ಥಿರತೆ ಇರಬೇಕು ಎಂದು ಇಂಗ್ಲೆಂಡ್ ತಂಡದ ಕೋಚ್ ಹಾಗೂ ನಾಯಕ ಪಂದ್ಯದ ಬಳಿಕ ಐಸಿಸಿ ರೆಫರಿ ಜಾವ್ಗಲ್ ಶ್ರೀನಾಥ್ ಎದುರು ಹೇಳಿದ್ದಾರೆ. 

ಭಾರತದ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಹೊಡೆತದ ಕ್ಯಾಚ್ ನ್ನು ಬೆನ್ ಸ್ಟೋಕ್ಸ್ ಹಿಡಿದರು. ಆದರೆ ಇದು ನೆಲಕ್ಕೆ ತಾಗಿದೆ ಎಂದು ಮೂರನೇ ಅಂಪೈರ್ ತೀರ್ಪು ಪ್ರಕಟಿಸಿದ್ದರು. ಮತ್ತೊಂದು ತೀರ್ಪಿನಲ್ಲಿ ರನ್ ಔಟ್ ನಿಂದ ರೋಹಿತ್ ಶರ್ಮಾಗೆ ಜೀವದಾನ ದೊರೆಯಿತು.   

ಎರಡೂ ಪ್ರಕರಣಗಳಲ್ಲಿ ಮೂರನೇ ಅಂಪೈರ್ ಕ್ಯಾಮರಾಗಳ ಬೇರೆ ಆಯಾಮಗಳನ್ನು ನೋಡಲಿಲ್ಲ, ತಕ್ಷಣವೇ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ರೂಟ್ ಹಾಗೂ ಸಿಲ್ವರ್ ವುಡ್ ಶ್ರೀನಾಥ್ ಅವರ ಬಳಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Stay up to date on all the latest ಕ್ರಿಕೆಟ್ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp