'ಬೆನ್' ಬಿಡದ ಅಶ್ವಿನ್: 11 ಬಾರಿ ಸ್ಟೋಕ್ಸ್ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್, ಅಪರೂಪದ ದಾಖಲೆ ಪಟ್ಟಿಗೆ ಸೇರ್ಪಡೆ
ಇಂಗ್ಲೆಂಡ್ ಆಲ್ ರೌಂಡರ್ ಅನ್ನು ಭಾರತದ ಸ್ವಿನ್ನರ್ ಆರ್ ಅಶ್ವಿನ್ 'ಬೆನ್' ಬಿಡದೇ ಕಾಡುತ್ತಿದ್ದು, 11 ಬಾರಿ ವಿಕೆಟ್ ಪಡೆಯುವ ಮೂಲಕ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
Published: 26th February 2021 04:27 PM | Last Updated: 26th February 2021 04:49 PM | A+A A-

ಆರ್ ಅಶ್ವಿನ್-ಬೆನ್ ಸ್ಟೋಕ್ಸ್
ಅಹ್ಮದಾಬಾದ್: ಇಂಗ್ಲೆಂಡ್ ಆಲ್ ರೌಂಡರ್ ಅನ್ನು ಭಾರತದ ಸ್ವಿನ್ನರ್ ಆರ್ ಅಶ್ವಿನ್ 'ಬೆನ್' ಬಿಡದೇ ಕಾಡುತ್ತಿದ್ದು, 11 ಬಾರಿ ವಿಕೆಟ್ ಪಡೆಯುವ ಮೂಲಕ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
ಹೌದು... ಆರ್ ಅಶ್ವಿನ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಬಾರಿ ಔಟ್ ಮಾಡಿದ ಆಟಗಾರ ಎಂದರೆ ಅದು ಬೇರಾರೂ ಅಲ್ಲ... ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್.... ಅಶ್ವಿನ್ ತಮ್ಮ ವೃತ್ತಿ ಜೀವನದಲ್ಲಿ ಬರೊಬ್ಬರಿ 11 ಬಾರಿ ಬೆನ್ ಸ್ಟೋಕ್ಸ್ ವಿಕೆಡ್ ಪಡೆದಿದ್ದು, ಈ ಪೈಕಿ ನಿನ್ನೆಯ ಮುಕ್ತಾಯಗೊಂಡ ಪಂದ್ಯ ಕೂಡ ಸೇರ್ಪಡೆಯಾಗಿದೆ.
ಆ ಮೂಲಕ ಅಶ್ವಿನ್ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಓರ್ವ ಬ್ಯಾಟ್ಸ್ ಮನ್ ಅನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಭಾರತದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಭಾರತದ ಕಪಿಲ್ ದೇವ್, ಇಶಾಂತ್ ಶರ್ಮಾ ಈ ಸಾಧನೆ ಮಾಡಿದ್ದರು. ಕಪಿಲ್ ದೇವ್ ಪಾಕಿಸ್ತಾನ ತಂಡದ ಮುದಾಸರ್ ನಜರ್ ರನ್ನು 12 ಬಾರಿ ಔಟ್ ಮಾಡಿದ್ದು ಗ್ರಹಂ ಗೂಚ್ ರನ್ನು 11 ಬಾರಿ ಔಟ್ ಮಾಡಿ, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಂತೆಯೇ ಇಶಾಂತ್ ಶರ್ಮಾ ಅವರು ಅಲೆಸ್ಟರ್ ಕುಕ್ ರನ್ನು 11 ಬಾರಿ ಔಟ್ ಮಾಡಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.