ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪ್ರಭುತ್ವ ಸಾಧಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
Published: 26th February 2021 09:50 PM | Last Updated: 26th February 2021 09:50 PM | A+A A-

ದೇವದತ್ ಪಡಿಕ್ಕಲ್
ಬೆಂಗಳುರು: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪ್ರಭುತ್ವ ಸಾಧಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
ಇದರೊಡನೆ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಮತ್ತಷ್ಟು ಸನಿಹವಾಗಿದೆ.ಶುಕ್ರವಾರ ನಡೆದ ಪಂದ್ಯದಲ್ಲಿ ಕೇರಳ ವಿರುದ್ಧ ಒಂಬತ್ತು ವಿಕೆಟ್ಗಳ ಜಯ ಸಾಧಿಸಿದ ಕರ್ನಾಟಕ ಪರ ಯುವ ಕ್ರಿಕೆಟಿಕ ದೇವದತ್ ಪಡಿಕ್ಕಲ್ ಶತಕ(ಸರಣಿಯಲ್ಲಿ ಸತತ ಎರಡನೇ ಶತಕ) ಮಹತ್ವದ ವಿಜಯಕ್ಕೆ ಕಾರಣವಾಗಿತ್ತು.
ಕೇರಳದ 278 ರನ್ಗಳ ಬೆನ್ನಟ್ಟಿದ ಕರ್ನಾಟಕವು 27 ಎಸೆತಗಳನ್ನು ಉಳಿಸಿಕೊಂಡಂತೆ ಜಯದ ಮಾಲೆ ಧರಿಸಿತ್ತು. ಪಡಿಕ್ಕಲ್ (138 ಎಸೆತಗಳಲ್ಲಿ 126 ರನ್) 13 ಬೌಂಡರಿ ಮತ್ತು ಎರಡು ಸಿಕ್ಸರ್ ಜತೆಗೆ ಅಜೇಯವಾಗಿ ಉಳಿದಿದ್ದರು.
ಇದಲ್ಲದೆ ಮಿಥುನ್ ಮಾರಕ ಬೌಲಿಂಗ್ ದಾಳಿ(52ಕ್ಕೆ 5) ಕೇರಳವನ್ನು ಕಟ್ಟಿಹಾಕುವಲ್ಲಿ ಸಫಲವಾಗಿತ್ತು.
ಈ ವಿಜಯದೊಡನೆ ಕರ್ನಾಟಕ 12 ಅಂಕಗಳೊಂದಿಗೆ ಎಲೈಟ್ ಸಿ ಗುಂಪಿನ ಅಗ್ರಪಟ್ಟಕ್ಕೆ ಏರಿದೆ.