ಮೊಟೆರಾ ಪಿಚ್ ವಿವಾದ: ಬಿಸಿಸಿಐ ನಡೆಯಿಂದ ಟೆಸ್ಟ್ ಕ್ರಿಕೆಟ್ ಗೆ ಹಾನಿ: ಮೈಕೆಲ್ ವಾನ್

ಕೇವಲ ಎರಡೇ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಮುಕ್ತಾಯವಾದ ಗುಜರಾತ್ ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದ ಪಿಚ್ ಬಗ್ಗೆ ಇದೀಗ ಅಂತಾರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕಳಪೆ ಪಿಚ್ ಗೆ ಬಿಸಿಸಿಐ ಕಾರಣ ಎಂದು ಹಲವು ಹಿರಿಯ ಮಾಜಿ ಆಟಗಾರರು ಅಸಮಾಧಾವ ಹೊರ ಹಾಕಿದ್ದಾರೆ.

Published: 27th February 2021 04:29 PM  |   Last Updated: 27th February 2021 04:29 PM   |  A+A-


Michael Vaughan

ಮೈಕಲ್ ವಾರ್ನ್

Posted By : Srinivasamurthy VN
Source : PTI

ಲಂಡನ್: ಕೇವಲ ಎರಡೇ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಮುಕ್ತಾಯವಾದ ಗುಜರಾತ್ ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದ ಪಿಚ್ ಬಗ್ಗೆ ಇದೀಗ ಅಂತಾರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕಳಪೆ ಪಿಚ್ ಗೆ ಬಿಸಿಸಿಐ ಕಾರಣ ಎಂದು ಹಲವು ಹಿರಿಯ ಮಾಜಿ ಆಟಗಾರರು ಅಸಮಾಧಾವ ಹೊರ ಹಾಕಿದ್ದಾರೆ.

ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಬರೊಬ್ಬರಿ 10 ವಿಕೆಟ್ ಗಳ ಅಂತರದಲ್ಲಿ ಜಯಿಸಿತ್ತು. ಇಂಗ್ಲೆಂಡ್ ನ ಎರಡೂ ಇನ್ನಿಂಗ್ಸ್ ನ ಸ್ಕೋರ್ 200 ದಾಟಿರಲಿಲ್ಲ. ಕಳೆದ ಕೆಲ ದಶಕಗಳಲ್ಲೇ ಇಂಗ್ಲೆಂಡ್ ಇಂತಹ ಕಳಪೆ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ  ಪ್ರಮುಖವಾಗಿ ಭಾರತದ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋತಿರುವುದು ಇಂಗ್ಲಿಷ್ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದೇ ಕಾರಣಕ್ಕೆ ಇದೀಗ ಮೊಟೆರಾ ಪಿಚ್ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು, ಭಾರತ ತನ್ನ ನೆಲದಲ್ಲಿ ತನಗೆ ಪೂರಕವಾದ ಪಿಚ್ ಅನ್ನು ನಿರ್ಮಿಸಿಕೊಂಡಿದೆ. ಆದರೆ ಇಂತಹ ಏಕಪಕ್ಷೀಯ ಪಿಚ್ ಗಳು ಟೆಸ್ಟ್ ಕ್ರಿಕೆಟ್  ಗೆ ನಿಜಕ್ಕೂ ಮಾರಕ. ಈ ಬಗ್ಗೆ ಐಸಿಸಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ಅಂತೆಯೇ 5 ದಿನಗಳ ಟೆಸ್ಟ್ ಪಂದ್ಯ ಕೇವಲ ಎರಡೇ ದಿನದಲ್ಲಿ ಅಂತ್ಯಗೊಳ್ಳುವುದು ಟೆಸ್ಟ್ ಕ್ರಿಕೆಟ್ ಗೆ ಯಾವುದೇ ಕೋನದಿಂದಲೂ ಒಳ್ಳೆಯದಲ್ಲ. ಭಾರತ ಮತ್ತು ಬಿಸಿಸಿಐ ನಂತಹ ಪವರ್ ಫುಲ್ ಸಂಸ್ಥೆಗಳು ತಮಗೆ ಬೇಕಾದ ರೀತಿಯಲ್ಲಿ ಪಿಚ್ ನಿರ್ಮಿಸಿಕೊಳ್ಳುತ್ತವೆ. ಆದರೆ ಇದರಿಂದ ಟೆಸ್ಟ್ ಕ್ರಿಕೆಟ್ ನ  ಸೌಂದರ್ಯವೇ ನಶಿಸಿ ಹೋಗುತ್ತದೆ. ಅಂತೆಯೇ ಈ ಬಗ್ಗೆ ಬ್ರಾಡ್ ಕಾಸ್ಟ್ ಸಂಸ್ಥೆಗಳು ಕೂಡ ಬದಲಾದ ಪರಿಸ್ಥಿತಿ ಕುರಿತು ಬಿಸಿಸಿಐ ಅನ್ನು ಪ್ರಶ್ನೆ ಮಾಡಿ ತಮಗಾದ ನಷ್ಟದ ಕುರಿತು ಮಾತನಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಮೇಲೆ ಹೂಡಿಕೆ ಮಾಡುವ ಹೂಡಿಕೆದಾರರೂ ಕೂಡ ವಿಮುಖರಾಗುತ್ತಾರೆ  ಎಂದು ಹೇಳಿದ್ದಾರೆ.

ತವರು ಕ್ರಿಕೆಟ್ ಸಂಸ್ಥೆಗಳು ತಮಗೆ ಬೇಕಾದ ರೀತಿಯಲ್ಲಿ ಪಿಚ್ ತಯಾರಿಸಿಕೊಂಡರು ಪ್ರವಾಸಿ ತಂಡಗಳ ಯಾವುದೇ ಯೋಜನೆ ವಿಫಲವಾಗುತ್ತದೆ. ಆದರೆ ತವರು ತಂಡ ಭಾರತ ಇಂತಹ ಪರಿಸ್ಥಿತಿಗೆ ಮೊದಲಿನಿಂದಲೇ ಸಿದ್ಧತೆ ನಡೆಸಿ ಯಶಸ್ವಿಯಾಗಿದೆ. ಇದು ಭಾರತದ ಆಳವಿಲ್ಲದ ಗೆಲವು (ಶಾಲೋ ವಿಕ್ಟರಿ).. ನಿಜ  ಹೇಳಬೇಕು ಎಂದರೆ ಈ ಪಂದ್ಯದಲ್ಲಿ ಯಾರೂ ಗೆದ್ದಿಲ್ಲ..ಕಳೆದ 2 ಪಂದ್ಯಗಳಲ್ಲಿನ ಪಿಚ್ ಗಳು ಆಟಗಾರರು ಮಂಡಿಯೂರುವಂತೆ ಮಾಡಿದೆ. ಈ ಪಿಚ್ ನಲ್ಲಿ 250 ರನ್ ಗಳಿಸಿದರೇ ಅದೇ ದೊಡ್ಡ ಮೊತ್ತ.. ಹೀಗೆಂದು ಯಾರಾದರೂ ಹೇಗೆ ಹೇಳಲು ಸಾಧ್ಯ..ಅದೂ ಟೆಸ್ಟ್ ಕ್ರಿಕೆಟ್ ನಲ್ಲಿ....ಇಂತಹ ಕಳಪೆ ಪಿಚ್ ಗಳನ್ನು ಟೆಸ್ಟ್  ಚಾಂಪಿಯನ್ ಷಿಪ್ ನಲ್ಲಿ ಬಳಸಿದ್ದಕ್ಕಾಗಿ ಐಸಿಸಿ ಅಂಕಗಳನ್ನು ಕಡಿತಗೊಳಿಸಬೇಕು.. ಎಂದು ವಾನ್ ಆಗ್ರಹಿಸಿದ್ದಾರೆ.  
 

Stay up to date on all the latest ಕ್ರಿಕೆಟ್ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp