ಮೊಟೆರಾ ಪಿಚ್: ಪ್ರಮಾಣಿಕವಾಗಿರಿ ಇಂಗ್ಲೆಂಡ್ ತಂಡದ ಕಿವಿ ಹಿಂಡಿದ ಕೆವಿನ್ ಪೀಟರ್ಸನ್!

ಮೊಟೆರಾ ಪಿಚ್ ಬಗ್ಗೆ ಪ್ರಶ್ನೆ ಎತ್ತಿರುವ ಇಂಗ್ಲೆಂಡ್ ಆಟಗಾರರು ಪ್ರಾಮಾಣಕಿವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

Published: 28th February 2021 04:23 PM  |   Last Updated: 28th February 2021 04:23 PM   |  A+A-


Kevin Pietersen

ಕೆವಿನ್ ಪೀಟರ್ ಸೆನ್ (ಸಂಗ್ರಹ ಚಿತ್ರ)

Posted By : Srinivasamurthy VN
Source : Online Desk

ಲಂಡನ್: ಮೊಟೆರಾ ಪಿಚ್ ಬಗ್ಗೆ ಪ್ರಶ್ನೆ ಎತ್ತಿರುವ ಇಂಗ್ಲೆಂಡ್ ಆಟಗಾರರು ಪ್ರಾಮಾಣಕಿವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಇಂಗ್ಲೆಂಡ್ ಹೀನಾಯ ಸೋಲಿಗೆ ವೇದಿಕೆಯಾಗಿದ್ದ ಮೊಟೆರಾ ಪಿಚ್ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಭಾರತದ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲಾಗದ ಇಂಗ್ಲೆಂಡ್ ಆಟಗಾರರು ಪಿಚ್ ಅನ್ನು ದೂರುತ್ತಿದ್ದಾರೆ. ಆದರೆ ಇಂಗ್ಲೆಂಡ್ ಆಟಗಾರರ ವರ್ತನೆಯನ್ನು ಸ್ವತಃ ಇಂಗ್ಲೆಂಡ್ ಮಾಜಿ ಆಟಗಾರರೇ ಪ್ರಶ್ನೆ ಮಾಡುತ್ತಿದ್ದು, ಇದೀಗ ಈ ಪಟ್ಟಿಗೆ ಕೆವಿನ್ ಪೀಟರ್ಸನ್ ಸೇರ್ಪಡೆಯಾಗಿದ್ದಾರೆ. 

'ಕೆಲವು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಇದೀಗ ಎಚ್ಚರಗೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಆದರೆ ಆಟಗಾರರು ಪ್ರಾಮಾಣಿಕವಾಗಿರಬೇಕು. ಮೊಟೆರಾ ಪಿಚ್ ನಲ್ಲಿ ಇಂಗ್ಲೆಂಡ್ ಆಟಗಾರರ ಬ್ಯಾಟಿಂಗ್ ಕಳಪೆಯಾಗಿತ್ತು ಎಂಬುದು ಸತ್ಯ ಎಂದು ಪೀಟರ್ಸನ್ ಹೇಳಿದ್ದಾರೆ.

ಈ ಹಿಂದೆಯೂ ಕೂಡ ಇದೇ ಮೊಟೆರಾ ಪಿಚ್ ಬಗ್ಗೆ ಮಾತನಾಡಿದ್ದ ಕೆಪಿ, ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. 'ಬ್ಯಾಟಿಂಗ್ ಕೌಶಲ್ಯ ಹಾಗೂ ತಂತ್ರಗಾರಿಕೆ ಪರೀಕ್ಷಿಸ್ಪಡುವ ಇಂತಹ ಪಿಚ್‌ಗಳು ಒಂದು ಪಂದ್ಯಕ್ಕೆ ಯೋಗ್ಯ. ಆದರೆ ಇಂತಹ ವಿಕೆಟ್‌ಗಳನ್ನು ನಾನು ನೊಡಲು ಬಯಸಲಾರೆ. ನನಗನಿಸುತ್ತದೆ ಯಾವ ಆಟಗಾರನೂ ಇದನ್ನು ಇಷ್ಟಪಡಲಾರರು. ಅತ್ಯುತ್ತಮ, ಭಾರತ ಎಂದು ಹೇಳಿದ್ದರು. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp