ಟೆಸ್ಟ್ ಸರಣಿ: ಭಾರತಕ್ಕೆ ಅಭಿಮಾನಿಯ ವಿಡಿಯೋ ಕಂಟಕ, ರೋಹಿತ್ ಶರ್ಮಾ ಸೇರಿ 5 ಆಟಗಾರರಿಗೆ ಐಸೊಲೆಷನ್!

ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಹೌದು, ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿ ಐವರು ಆಟಗಾರರಿಗೆ ಐಸೋಲೇಷನ್ ಕಳುಹಿಸಲಾಗಿದೆ.

Published: 02nd January 2021 06:20 PM  |   Last Updated: 02nd January 2021 07:33 PM   |  A+A-


Indian Players

ಟೀಂ ಇಂಡಿಯಾ ಆಟಗಾರರು

Posted By : Vishwanath S
Source : Online Desk

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಹೌದು, ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿ ಐವರು ಆಟಗಾರರಿಗೆ ಐಸೋಲೇಷನ್ ಕಳುಹಿಸಲಾಗಿದೆ. 

ನಿನ್ನೆ ಟೀಂ ಇಂಡಿಯಾ ಆಟಗಾರರು ರೆಸ್ಟೋರೆಂಟ್ ಗೆ ಊಟಕ್ಕೆ ತೆರಳಿದ್ದರು. ಇದನ್ನು ಟೀಂ ಇಂಡಿಯಾದ ಅಭಿಮಾನಿಯೊಬ್ಬ ವಿಡಿಯೋ ಮಾಡಿ ಅದನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. 

ಕೊರೋನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಉಭಯ ತಂಡದ ಆಟಗಾರರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂಬ ನಿಯಮವಿದೆ. ಆದರೆ ಟೀಂ ಇಂಡಿಯಾದ ಆಟಗಾರರಾದ ರೋಹಿತ್ ಶರ್ಮಾ, ರಿಷಬ್ ಪಂತ್, ಶುಭಮನ್ ಗಿಲ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ರೆಸ್ಟೋರೆಂಟ್ ವೊಂದಕ್ಕೆ ತೆರಳಿದ್ದರು. 

ಈ ವೇಳೆ ಭಾರತೀಯ ಮೂಲದ ನವಲ್ ದೀಪ್ ಸಿಂಗ್ ಎಂಬಾತ ಪತ್ನಿ ಸಮೇತ ಹೊಟೇಲ್ ಗೆ ಬಂದಿದ್ದನು. ಇಲ್ಲಿ ಟೀಂ ಇಂಡಿಯಾ ಆಟಗಾರರನ್ನು ನೋಡಿದ ನವಲ್ ದೀಪ್ ಆಟಗಾರರಿಗೆ ತಿಳಿದಂತೆ ಅವರ ಬಿಲ್ ಅನ್ನು ಕಟ್ಟಿದ್ದನು. ಅಲ್ಲದೆ ತಾನು ತೆಗೆದಿದ್ದ ವಿಡಿಯೋವನ್ನು ಟ್ವೀಟ್ ಮಾಡಿದ್ದನು. ಇದು ಟೀಂ ಇಂಡಿಯಾಗೆ ಸಂಕಷ್ಟ ತಂದಿಟ್ಟಿದೆ. 

ಸದ್ಯ ಐವರು ಆಟಗಾರರನ್ನು ಐಸೋಲೇಷನ್ ಗೆ ಕಳುಹಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾ ಸೂಚಿಸಿದೆ. 

ಜನವರಿ 7ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಮೊದಲ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ರಹಾನೆಯ ನಾಯಕತ್ವದಲ್ಲಿ ಎರಡನೇ ಪಂದ್ಯವನ್ನು ಗೆದ್ದಿತ್ತು. ಇನ್ನು ರೋಹಿತ್ ಶರ್ಮಾ ತಂಡವನ್ನು ಸೇರಿರುವುದು ತಂಡಕ್ಕೆ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿದೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp