ಭಾರತೀಯ ಆಟಗಾರರಿಂದ ಕೊರೋನಾ ನಿಯಮ ಉಲ್ಲಂಘನೆ ಆರೋಪ; ಇಲ್ಲ ಅಂದ ಬಿಸಿಸಿಐ: ವಿಡಿಯೋ ನೋಡಿ!

ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ರೆಸ್ಟೋರೆಂಟ್ ವೊಂದರಲ್ಲಿ ಡಿನ್ನರ್ ಮಾಡಿರುವುದಾಗಿ ಅಭಿಮಾನಿಯೊಬ್ಬ ಫೋಟೋ ಮತ್ತು ವಿಡಿಯೋ ಟ್ವೀಟ್ ಮಾಡಿದ್ದಾರೆ. 

Published: 02nd January 2021 04:00 PM  |   Last Updated: 02nd January 2021 05:53 PM   |  A+A-


Indian-Players

ಭಾರತೀಯ ಆಟಗಾರರು

Posted By : Vishwanath S
Source : PTI

ಮೆಲ್ಬೋರ್ನ್: ಕೊರೋನಾ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿ ವೇಳೆ ಉಭಯ ತಂಡಗಳು ಕಟ್ಟುನಿಟ್ಟಾಗಿ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆ. ಆದರೆ ಇದೀಗ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ರೆಸ್ಟೋರೆಂಟ್ ವೊಂದರಲ್ಲಿ ಡಿನ್ನರ್ ಮಾಡಿರುವುದಾಗಿ ಅಭಿಮಾನಿಯೊಬ್ಬ ಫೋಟೋ ಮತ್ತು ವಿಡಿಯೋ ಟ್ವೀಟ್ ಮಾಡಿದ್ದಾರೆ. 

ಇದೇ ವಿಷಯವಾಗಿ ಕೆಲ ಆಸ್ಟ್ರೇಲಿಯಾ ಮಾಧ್ಯಮಗಳು ಸಹ ಟೀಂ ಇಂಡಿಯಾ ಆಟಗಾರರು ಕೊರೋನಾ ಮಾರ್ಗಸೂಚಿಯನ್ನು ದಿಕ್ಕರಿಸಿ ಹೊರಗೆ ತಿರುಗಾಡುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. 

ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್, ನವದೀಪ್ ಸೈನಿ ಮತ್ತು ಶುಭ್ ಮನ್ ಗಿಲ್ ಹೊಸ ವರ್ಷದ ಮೊದಲ ದಿನದಂದು ಮೆಲ್ಬರ್ನ್ ನಗರದ ಹೊಟೇಲ್ ಒಂದರಲ್ಲಿ ಮಧ್ಯಾಹ್ನದ ಊಟಕ್ಕೆ ಹೋಗಿದ್ದಾಗ ಅಭಿಮಾನಿಯೊಬ್ಬ ತಂಡದ ಆಟಗಾರರ ಬಿಲ್ ಅನ್ನು ತಾವೇ ಕಟ್ಟಿದ್ದಾರೆ. 

ಭಾರತೀಯ ಮೂಲದ ನವಲ್ ದೀಪ್ ಸಿಂಗ್ ಎಂಬಾತ ಪತ್ನಿ ಸಮೇತ ಹೊಟೇಲ್ ಗೆ ಬಂದಿದ್ದಾನೆ. ಈ ವೇಳೆ ಟೀಂ ಇಂಡಿಯಾ ಆಟಗಾರರನ್ನು ನೋಡಿದ ನವಲ್ ದೀಪ್ ಆಟಗಾರರಿಗೆ ತಿಳಿದಂತೆ ಅವರ ಬಿಲ್ ಅನ್ನು ಕಟ್ಟಿದ್ದಾರೆ. ನಂತರ ಈ ವಿಷಯ ತಿಳಿದ ಆಟಗಾರರು ಹಣವನ್ನು ತೆಗೆದುಕೊಳ್ಳುವಂತೆ ಕೇಳಿದ್ದಾರೆ. ಅದಕ್ಕೆ ನವಲ್ ದೀಪ್ ಬೇಡ ನನಗೆ ನಿಮ್ಮ ಆಟೋಗ್ರಾಫ್ ನೀಡಿ ಸಾಕು ಎಂದು ಕೇಳಿದ್ದಾರೆ. 

ಭಾರತೀಯ ರೂಪಾಯಿ ಪ್ರಕಾರ ನವಲ್ ದೀಪ್ 6,683 ರೂಪಾಯಿನ್ನು ಕಟ್ಟಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp