ರಿಷಬ್ ಪಂತ್ ಔಟ್ ಮಾಡಲು ಕ್ರೀಸ್ ಮಾರ್ಕ್ ಬದಲಿಸಿ ಸ್ಟೀವ್ ಸ್ಮಿತ್ ಕುತಂತ್ರ; ವಿಡಿಯೋ ನೋಡಿ!
ಚೆಂಡು ವಿರೂಪಗೊಳಿಸಿ, ಸ್ಲೆಡ್ಜಿಂಗ್ ಮಾಡಿ ಎದುರಾಳಿ ಆಟಗಾರರನ್ನು ಔಟ್ ಮಾಡುವ ಕುತಂತ್ರಗಳನ್ನು ಆಸ್ಟ್ರೇಲಿಯನ್ನರು ಅದಾಗಲೇ ಬಳಸಿದ್ದಾರೆ. ಇದೀಗ ಸ್ಟೀವ್ ಸ್ಮಿತ್ ರಿಷಬ್ ಪಂತ್ ರ ಕ್ರೀಸ್ ಮಾರ್ಕ್ ಅನ್ನು ಬದಲಿಸಿ ಹೊಸ ಕುತಂತ್ರ ಮಾಡಿ ಸಿಕ್ಕಿಬಿದ್ದಿದ್ದಾರೆ.
Published: 11th January 2021 01:55 PM | Last Updated: 11th January 2021 03:06 PM | A+A A-

ಸ್ಟಂಪ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ
ಸಿಡ್ನಿ: ಚೆಂಡು ವಿರೂಪಗೊಳಿಸಿ, ಸ್ಲೆಡ್ಜಿಂಗ್ ಮಾಡಿ ಎದುರಾಳಿ ಆಟಗಾರರನ್ನು ಔಟ್ ಮಾಡುವ ಕುತಂತ್ರಗಳನ್ನು ಆಸ್ಟ್ರೇಲಿಯನ್ನರು ಅದಾಗಲೇ ಬಳಸಿದ್ದಾರೆ. ಇದೀಗ ಸ್ಟೀವ್ ಸ್ಮಿತ್ ರಿಷಬ್ ಪಂತ್ ರ ಕ್ರೀಸ್ ಮಾರ್ಕ್ ಅನ್ನು ಬದಲಿಸಿ ಹೊಸ ಕುತಂತ್ರ ಮಾಡಿ ಸಿಕ್ಕಿಬಿದ್ದಿದ್ದಾರೆ.
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇನ್ನು ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ತಂಡದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಇನ್ನು ಡ್ರಿಂಕ್ಸ್ ಬ್ರೇಕ್ ನಲ್ಲಿ ಸ್ಟೀವ್ ಸ್ಮಿತ್ ಬಂದು ಕ್ರೀಸ್ ಮಾರ್ಕ್ ಅನ್ನು ಬದಲಾಯಿಸುತ್ತಿರುವ ದೃಶ್ಯಗಳು ವಿಕೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಂತ್ ಅರ್ಧ ಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಇನ್ನು ಪಂದ್ಯ ಕೈಚೆಲ್ಲಿ ಹೋಗುತ್ತದೆ ಎಂದು ಹೆದರಿದ ಸ್ಮಿತ್ ಕುತಂತ್ರ ಮಾಡಿದ್ದಾರೆ. ಪಂತ್ ರನ್ನು ಔಟ್ ಮಾಡಬೇಕು ಎಂಬ ದುರುದ್ದೇಶದಿಂದ ಸ್ಟ್ರೈಕಿಂಗ್ ಪಾಯಿಂಟ್ ಬಳಿ ಬಂದ ಸ್ಮಿತ್ ಪಂತ್ ಗುರುತು ಮಾಡಿದ್ದ ಬ್ಯಾಟಿಂಗ್ ಮಾರ್ಕ್ ಅನ್ನು ಅಳಿಸಿ ಬೇರೆ ಗೆರೆ ಎಳೆದಿದ್ದಾರೆ.
ಸ್ಮಿತ್ ಕುತಂತ್ರ ಸ್ಟಂಪ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಮಿತ್ ರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸುತ್ತಿದ್ದಾರೆ.
ರಿಷಬ್ ಪಂತ್ ಅಂತಿಮವಾಗಿ 97 ರನ್ ಗಳಿಸಿದ್ದಾಗ ಲ್ಯಾನ್ ಬೌಲಿಂಗ್ ನಲ್ಲಿ ಔಟ್ ಆಗಿ ನಿರ್ಗಮಿಸಿದರು.