ಜನಾಂಗೀಯ ನಿಂದನೆ ಒಪ್ಪಲು ಸಾಧ್ಯವಿಲ್ಲ: ಸಿರಾಜ್, ಟೀಂ ಇಂಡಿಯಾ ಬಳಿ ಕ್ಷಮೆಯಾಚಿಸಿದ ವಾರ್ನರ್

ಜನಾಂಗೀಯ ನಿಂದನೆ ಒಪ್ಪಲು ಸಾಧ್ಯವಿಲ್ಲ, ಘಟನೆ ಸಂಬಂಧ ಮೊಹಮ್ಮದ್ ಸಿರಾಜ್ ಹಾಗೂ ಟೀಂ ಇಂಡಿಯಾ ಬಳಿ ಕ್ಷಮೆಯಾಚಿಸುತ್ತೇನೆಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಹೇಳಿದ್ದಾರೆ. 

Published: 12th January 2021 10:53 AM  |   Last Updated: 12th January 2021 12:42 PM   |  A+A-


India and Australia after hard-fought draw at SCG

ಡ್ರಾದಲ್ಲಿ ಅಂತ್ಯಗೊಂಡ ಪಂದ್ಯದ ವೇಳೆ ಎರಡೂ ತಂಡ ಆಟಗಾರರು ಅಭಿನಂದನೆ ಸಲ್ಲಿಸುತ್ತಿರುವುದು.

Posted By : Manjula VN
Source : ANI

ಸಿಡ್ನಿ: ಜನಾಂಗೀಯ ನಿಂದನೆ ಒಪ್ಪಲು ಸಾಧ್ಯವಿಲ್ಲ, ಘಟನೆ ಸಂಬಂಧ ಮೊಹಮ್ಮದ್ ಸಿರಾಜ್ ಹಾಗೂ ಟೀಂ ಇಂಡಿಯಾ ಬಳಿ ಕ್ಷಮೆಯಾಚಿಸುತ್ತೇನೆಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ವಾರ್ನರ್, ಈ ವಾರ ಮತ್ತೆ ಮೈದಾನಕ್ಕಿಳಿದಿದ್ದು, ಬಹಳ ಸಂತೋಷ ತಂದಿದೆ. ಇದು ನಮ್ಮ ಆದರ್ಶ ಫಲಿತಾಂಶವಲ್ಲ. ಟೆಸ್ಟ್ ಕ್ರಿಕೆಟ್ ಎಂಬುದೇ ಹೀಗೆ. 5 ದಿನಗಳ ಕಠಿಣ ಆಟದಲ್ಲಿ ನಮ್ಮ ತಂಡ ಸಾಧ್ಯವಾದಷ್ಟು ಶ್ರಮಪಟ್ಟು ಆಗಿದ್ದರು. ಟೀ ಇಂಡಿಯಾ ಆಡಿದ ರೀತಿ ಪಂದ್ಯವನ್ನು ಡ್ರಾ ಮಾಡಿಕೊಂಡ ರೀತಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ನಾವು ಕ್ರಿಕೆಟ್ ನ್ನು ಅಷ್ಟೊಂದು ಪ್ರೀತಿಸುತ್ತೇವೆ. ಏನೇ ಆದರೂ ಜನಾಂಗೀ ನಿಂದನೆ ಒಪ್ಪುವಂತಹದಲ್ಲ. ಘಟನೆ ಬಗ್ಗೆ ಟೀ ಇಂಡಿಯಾ ಹಾಗೂ ಮೊಹಮ್ಮದ್ ಸಿರಾಜ್ ಬಳಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ. 

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಜ.10 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಜನಾಂಗೀಯ ನಿಂದನೆ ನಡೆದಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಕೆಲವರು ಸಿರಾಜ್ ಗೆ ಬ್ರೌನ್ ಡಾಗ್, ದೊಡ್ಡ ಕೋತಿ ಎಂದು ನಿಂದಿಸಿದ್ದರು. ಹೀಗಾಗಿ ಪಂದ್ಯ ಸುಮಾರು 8 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಬಳಿಕ ಕೆಲ ಪ್ರೇಕ್ಷಕರ ವಿರುದ್ಧ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡು ಮೈದಾನದಿಂದ ಹೊರಗೆ ಕಳುಹಿಸಿದ್ದರು. ಕೆಲ ನಿಮಿಷಗಳ ಬಳಿಕ ಪಂದ್ಯ ಆರಂಭವಾಗಿತ್ತು. 

ಈ ಸಂಬಂಧ ಟೀ ಇಂಡಿಯಾ ಅಧಿಕೃತವಾಗಿ ದೂರನ್ನೂ ನೀಡಿತ್ತು. ಘಟನೆಗೆ ಟೀ ಇಂಡಿಯಾ ನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 

ಭಾರತದ ತಂಡದ ವೇಗಿಗಳಾದ ಜಸ್ ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ರನ್ನು ಗುರಿಯಾಗಿರಿಸಿಕೊಂಡು ಆಸ್ಟ್ರೇಲಿಯಾ ಪ್ರೇಕ್ಷಕರು ಜನಾಂಗೀಯ ನಂದನೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದು ಗೂಂಡಾ ವರ್ತನೆಯ ಪರಮಾವಧಿ ಎಂದು ಹೇಳಿದ್ದರು. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp