ಗಾಯ ಸಮಸ್ಯೆ: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆರಿಸುವುದು ಟೀಂ ಇಂಡಿಯಾಗೆ ದೊಡ್ಡ ಸವಾಲು!
ಸಿಡ್ನಿಯಲ್ಲಿ ದಿಟ್ಟ ಹೋರಾಟದ ನಂತರ ಭಾರತ ತಂಡವು ಬ್ರಿಸ್ಬೇನ್ಗೆ ತಲುಪಿದೆ. ಇಲ್ಲಿ ಅವರು ತಮ್ಮ ತಂಡದ ಹೋಟೆಲ್ನಲ್ಲಿ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ.
Published: 13th January 2021 07:55 PM | Last Updated: 13th January 2021 07:55 PM | A+A A-

ಭಾರತ ತಂಡ
ಬ್ರಿಸ್ಬೇನ್: ಸಿಡ್ನಿಯಲ್ಲಿ ದಿಟ್ಟ ಹೋರಾಟದ ನಂತರ ಭಾರತ ತಂಡವು ಬ್ರಿಸ್ಬೇನ್ಗೆ ತಲುಪಿದೆ. ಇಲ್ಲಿ ಅವರು ತಮ್ಮ ತಂಡದ ಹೋಟೆಲ್ನಲ್ಲಿ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಬ್ರಿಸ್ಬೇನ್ನಲ್ಲಿ ಟೀಮ್ ಇಂಡಿಯಾ ಎದುರಿಸುತ್ತಿರುವ ದೊಡ್ಡ ಸವಾಲು ಸದೃಢ ತಂಡವನ್ನು ಕಟ್ಟುವುದರ ಮೇಲೆ ನೆಟ್ಟಿದೆ.
ಭಾರತಕ್ಕೆ ಗಾಯಾಳು ಆಟಗಾರರ ಸಮಸ್ಯೆ ಕಾಡುತ್ತಿದೆ. ಆರಂಭಿಕ ರೋಹಿತ್ ಶರ್ಮಾ(ಮೊದಲ ಎರಡು ಟೆಸ್ಟ್) ಮತ್ತು ವೇಗದ ಬೌಲರ್ ಇಶಾಂತ್ ಶರ್ಮಾ(ಇಡೀ ಸರಣಿಯಿಂದ) ಇಲ್ಲದೆ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಆಗಮಿಸಿತ್ತು.
ಐಪಿಎಲ್ನಲ್ಲಿ ಇಬ್ಬರೂ ಆಟಗಾರರು ಗಾಯಗೊಂಡಿದ್ದರು. ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡರೆ, ಎರಡನೇ ವೇಗದ ಬೌಲರ್ ಉಮೇಶ್ ಯಾದವ್ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಗಾಯಗೊಂಡರು ಮತ್ತು ಇಬ್ಬರೂ ವೇಗದ ಬೌಲರ್ಗಳು ಸರಣಿಯಿಂದ ಹೊರಗುಳಿದಿದ್ದರು.
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಎಡಗೈ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಎಡಗೈ ಹೆಬ್ಬೆರಳು ಮುರಿದು ಬ್ರಿಸ್ಬೇನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಮೂರನೇ ಟೆಸ್ಟ್ನಲ್ಲಿ ತಂಡದ ಅಗ್ರ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಮತ್ತು ಬ್ರಿಸ್ಬೇನ್ನಲ್ಲಿ ನಡೆಯುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ನಿಂದ ಹೊರಗುಳಿದರು.