ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ: 'ಪಾಪರಾಜಿ'ಗಳಿಗೆ ವಿರುಷ್ಕಾ ಮನವಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ದಂಪತಿಗೆ ಇದೀಗ ಪಾಪರಾಜಿಗಳ ಕಾಟ ಕೂಡ ಆರಂಭವಾಗಿದೆ.

Published: 13th January 2021 02:22 PM  |   Last Updated: 13th January 2021 02:33 PM   |  A+A-


Kohli Anushka baby

ಕೊಹ್ಲಿ-ಅನುಷ್ಕಾ

Posted By : Srinivasamurthy VN
Source : PTI

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ದಂಪತಿಗೆ ಇದೀಗ ಪಾಪರಾಜಿಗಳ ಕಾಟ ಕೂಡ ಆರಂಭವಾಗಿದೆ.

ದಂಪತಿಗಳ ಮಗು ಫೋಟೋ ತೆಗೆಯಲು ಪಾಪರಾಜಿಗಳು (ಛಾಯಾಚಿತ್ರಕಾರರು) ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದು, ಇದರಿಂದ ದಂಪತಿಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ. ಇದೇ ಕಾರಣಕ್ಕೆ ವಿರುಷ್ಕಾ ದಂಪತಿ ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, 'ನಮಗೆ ಹೆಣ್ಣು ಮಗುವಿನ ಜನನವಾಗಿದ್ದು, ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ. ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ನಾವು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅನುಷ್ಕಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ನಾವು ನಮ್ಮ ಜೀವನದ ಈ ಅಧ್ಯಾಯವನ್ನು ಪ್ರಾರಂಭಿಸಲು ನಿಮ್ಮ ಆಶೀರ್ವದದ ಅಗತ್ಯವಿದೆ.  ಈ ಸಮಯದಲ್ಲಿ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬಹುದು ಎಂದು ನಾವು ಭಾವಿಸುತ್ತೇವೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಆ ಮೂಲಕ ನೇರವಾಗಿ ಮಗುವಿನ ಫೋಟೊ ತೆಗೆಯದಂತೆ ಖಾಸಗಿ ತನಕ್ಕೆ ಗೌರವ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ಸೂಕ್ತ ಸಂದರ್ಭದಲ್ಲಿ ನಾವೇ ನಿಮಗೆ ಮಾಹಿತಿ ನೀಡುತ್ತೇವೆ ಎಂದು ಕೊಹ್ಲಿ ಪಾಪರಾಜಿಗಳಿಗೆ ತಿಳಿಸಿದ್ದಾರೆ.

2017ರ ಡಿಸೆಂಬರ್ 11 ವಿರುಷ್ಕಾ ಜೋಡಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Stay up to date on all the latest ಕ್ರಿಕೆಟ್ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp