ಲೈಂಗಿಕ ದೌರ್ಜನ್ಯ ಪ್ರಕರಣ: ಪಾಕ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಎಫ್ಐಆರ್
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮೇಲಿನ ಲೈಂಗಿಕ ದೌರ್ಜನ್ಯ ದೂರಿನ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಲಾಹೋರ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
Published: 15th January 2021 07:17 PM | Last Updated: 15th January 2021 08:01 PM | A+A A-

ಬಾಬರ್ ಅಜಮ್
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮೇಲಿನ ಲೈಂಗಿಕ ದೌರ್ಜನ್ಯ ದೂರಿನ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಲಾಹೋರ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಅದರಂತೆ ಇದೀಗ ವಿಶ್ವದ ಅಗ್ರಾಮಾನ್ಯ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾದ ಬಾಬರ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿವಾಹವಾಗುವ ಭರವಸೆಯಿಂದಿಗೆ ಹಮೀಜಾ ಎಂಬ ಯುವತಿಯನ್ನು ಹತ್ತು ವರ್ಷಗಳಿಂದ ದೈಹಿಕವಾಗಿ ಬಳಸಿಕೊಂಡು ಆಕೆಯನ್ನು ಗರ್ಭಿಣಿಯಾಗಿಸಿರುವ ಆರೋಪ ಬಾಬರ್ ಮೇಲಿದೆ.
ಲಾಹೋರ್ನ ಹಮೀಜಾ ಮುಖ್ತಾರ್ ಈ ಬಗ್ಗೆ ಬಾಬರ್ ವಿರುದ್ಧ ದೂರು ಸಲ್ಲಿಸಿದ್ದಾರೆ.ಅರ್ಜಿದಾರರು ಆಕೆಯ ವೈದ್ಯಕೀಯ ದಾಖಲೆಗಳನ್ನು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ನೀಡಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯ ಆರೋಪದ ಬಗೆಗೆ ಸೂಕ್ತ ತನಿಖೆ ನಡೆಸಲು ಆದೇಶಿಸಿದೆ.
ಬಾಬರ್ ವಿರುದ್ಧ ನಮೀರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಮೀಜಾ ದೃಢಪಡಿಸಿದ್ದಾರೆ.