ಭಾರತ-ಆಸ್ಟ್ರೇಲಿಯಾ 4 ನೇ ಟೆಸ್ಟ್: ಸೆಕ್ಯುರಿಟಿ ಗಾರ್ಡ್ ನಿಂದ ಭಾರತೀಯ ಅಭಿಮಾನಿಗೆ ನಿಂದನೆಆರೋಪ; ಎಸ್ ಸಿಜಿ ತನಿಖೆ

ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರಷ್ಟೇ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಷ್ಟೇ ಅಲ್ಲದೇ, ಭಾರತೀಯ ಅಭಿಮಾನಿಗಳೂ ಗುರಿಯಾಗಿದ್ದಾರೆ. 

Published: 16th January 2021 06:46 PM  |   Last Updated: 16th January 2021 06:49 PM   |  A+A-


Indian Cricket Fans (Photo | AP)

ಭಾರತ-ಆಸ್ಟ್ರೇಲಿಯಾ 4 ನೇ ಟೆಸ್ಟ್: ಸೆಕ್ಯುರಿಟಿ ಗಾರ್ಡ್ ನಿಂದ ಭಾರತೀಯ ಅಭಿಮಾನಿಗೆ ನಿಂದನೆ ಬಗ್ಗೆ ಎಸ್ ಸಿಜಿ ತನಿಖೆ

Posted By : Srinivas Rao BV
Source : The New Indian Express

ಸಿಡ್ನಿ: ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರಷ್ಟೇ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಷ್ಟೇ ಅಲ್ಲದೇ, ಭಾರತೀಯ ಅಭಿಮಾನಿಗಳೂ ಗುರಿಯಾಗಿದ್ದಾರೆ. 

ಸ್ಟ್ಯಾಂಡ್ ನಲ್ಲಿ ಮಧ್ಯಮ ಶ್ರೇಣಿಯ ಭದ್ರತಾ ಅಧಿಕಾರಿ ತನ್ನನ್ನು ಜನಾಂಗಿಯವಾಗಿ ಗುರುತಿಸಿ, ನಿಂದಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ದೂರು ನೀಡಿದ್ದಾರೆ.

ಈ ದೂರು ದಾಖಲಾಗುತ್ತಿದ್ದಂತೆಯೇ ಎಸ್ ಸಿಜಿ ಆಪರೇಟರ್ ಗಳು ತನಿಖೆ ಕೈಗೊಂಡಿದ್ದಾರೆ. "ನೀನು ಎಲ್ಲಿಯವನೋ ಅಲ್ಲಿಗೇ ವಾಪಸ್ ಹೋಗು ಎಂಬ" ಮಾತುಗಳನ್ನು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಹೇಳಿದ್ದಾರೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ನ ಪೈಕಿ ಸಿಡ್ನಿಯಲ್ಲಿ ವಾಸಿಸುತ್ತಿರುವ ಕೃಷ್ಣ ಕುಮಾರ್ ಜನಾಂಗೀಯ ನಿಂದನೆಗೆ ಗುರಿಯಾಗಿರುವ ವ್ಯಕ್ತಿಯಾಗಿದ್ದಾರೆ. ದೂರು ನೀಡಲು ಹೋದಾಗಲೂ ತಮಗೆ ಕಹಿ ಅನುಭವಗಳಾಗಿವೆ ಎಂದು ಕೃಷ್ಣ ಕುಮರ್ ಆರೋಪಿಸಿದ್ದಾರೆ. 

ಪಂದ್ಯದ ಅಂತಿಮ ದಿನದಂದು ತಮ್ಮನ್ನು ಹಾಗೂ ಭಾರತೀಯ ತಂಡವನ್ನು curry munchers ಎಂಬ ಶಬ್ದವನ್ನು ಪ್ರಯೋಗಿಸಿ ಕೆಲವರು ಜನಾಂಗೀಯ ನಿಂದನೆ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಗೆ ಮೊದಲ ಬಾರಿಗೆ ಜನಾಂಗೀಯ ನಿಂದನೆಯಾಗಿ 6 ಮಂದಿಯನ್ನು ಕ್ರೀಡಾಂಗಣದಿಂದ ಹೊರಹಾಕುವುದಕ್ಕೂ 24 ಗಂಟೆಗಳ ಮುನ್ನ ಈ ಘಟನೆ ನಡೆದಿದೆ ಎಂದು ಕೃಷ್ಣ ಕುಮಾರ್ ಆರೋಪಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp