4ನೇ ಹಾಗೂ ನಿರ್ಣಾಯಕ ಟೆಸ್ಟ್: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ ಮುನ್ನಡೆ

ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವಾಗಿರುವ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಬೌಲರ್ ಗಳಾದ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ವಿಭಾಗದಲ್ಲೂ ಮಿಂಚಿದ್ದು ತಂಡಕ್ಕೆ ಆಸರೆಯಾದರು. 

Published: 17th January 2021 02:03 PM  |   Last Updated: 17th January 2021 03:22 PM   |  A+A-


4th Test: Australia lead by 54 runs; 21-0 at close

ಶಾರ್ದೂಲ್ ಠಾಕೂರ್

Posted By : Srinivas Rao BV
Source : The New Indian Express

ಬ್ರಿಸ್ಬೇನ್: ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವಾಗಿರುವ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಬೌಲರ್ ಗಳಾದ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ವಿಭಾಗದಲ್ಲೂ ಮಿಂಚಿದ್ದು ತಂಡಕ್ಕೆ ಆಸರೆಯಾದರು. 

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 369 ರನ್ ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಟಗಾರರ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು, ಆದರೆ 7 ನೇ ವಿಕೆಟ್ ಗೆ ದಾಖಲೆಯ ಜೊತೆಯಾಟದ ಪರಿಣಾಮವಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 336 ರನ್ ಗಳನ್ನು ದಾಖಲಿಸಲು ಸಾಧ್ಯವಾಯಿತು.

ವಾಷಿಂಗ್ ಟನ್ ಸುಂದರ್ (62) ಶಾರ್ದೂಲ್ (67) ರನ್ ಗಳಿಸುವ ಮೂಲಕ 123 ರನ್ ಗಳ ಜೊತೆಯಾಟ ದಾಖಲೆ ನಿರ್ಮಿಸಿತು.

ಸ್ಕೋರ್ ವಿವರ: 

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 115.2 ಓವರ್ ಗಳಿಗೆ ಸರ್ವಪತನ 369 ರನ್ ಮಾರ್ಕಸ್ ಲಾಬುಶೇನ್ 108, ಟಿ ಪೇಯ್ನ್ 50, ಮ್ಯಾಥ್ಯೂ ವೇಡ್ 45; 

ಭಾರತದ ಬೌಲಿಂಗ್: ಟಿ.ನಟರಾಜನ್ 78 ರನ್/3 ವಿಕೆಟ್, ಠಾಕೂರ್ 94 ರನ್ ನೀಡಿ 3 ವಿಕೆಟ್, ವಾಷಿಂಗ್ ಟನ್ ಸುಂದರ್ 89 ರನ್ ನೀಡಿ 3 ವಿಕೆಟ್ ಗಳಿಸಿದರು.

ಭಾರತ ಮೊದಲ ಇನ್ನಿಂಗ್ಸ್: 111.4 ಓವರ್ ಗಳಿಗೆ 336 ರನ್ ಗಳಿಸಿ ಸರ್ವಪತನ ಶಾರ್ದೂಲ್ ಠಾಕೂರ್ 67 ರನ್, ವಾಷಿಂಗ್ ಟನ್ ಸುಂದರ್ 62 ರನ್, ರೋಹಿತ್ ಶರ್ಮಾ 44 ರನ್

ಆಸ್ಟ್ರೇಲಿಯಾ ಬೌಲಿಂಗ್: ಜೆ ಹ್ಯಾಜೆಲ್ವುಡ್ 57 ರನ್ ನೀಡಿ 5 ವಿಕೆಟ್,  ಮಿಚೆಲ್ ಸ್ಟಾರ್ಕ್ 88 ರನ್ ನೀಡಿ 2 ವಿಕೆಟ್ ಗಳಿಸಿದ್ದಾರೆ.
 


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp