4ನೇ ಟೆಸ್ಟ್: ಸುಂದರ್-ಶಾರ್ದೂಲ್ ಅದ್ಭುತ ಜೊತೆಯಾಟ ಮೊದಲ ಅರ್ಧಶತಕ, 2 ದಶಕಗಳ ಹಿಂದಿನ ದಾಖಲೆ ಪುಡಿ!

ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಮೊದಲ ಅರ್ಧ ಶತಕ ದಾಖಲಿಸಿದ್ದು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿನಂದನೆ ಸಲ್ಲಿಸಿದ್ದಾರೆ. 

Published: 17th January 2021 12:10 PM  |   Last Updated: 17th January 2021 01:48 PM   |  A+A-


Washington Sundar-Shardul

ವಾಷಿಂಗ್ ಟನ್ ಸುಂದರ್-ಶಾರ್ದೂಲ್ ಠಾಕೂರ್

Posted By : Srinivas Rao BV
Source : Online Desk

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಮೊದಲ ಅರ್ಧ ಶತಕ ದಾಖಲಿಸಿದ್ದು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿನಂದನೆ ಸಲ್ಲಿಸಿದ್ದಾರೆ. 

ಮೊದಲ ಅರ್ಧಶತಕ ದಾಖಲಿಸಿದ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಗೆ ಅಭಿನಂದನೆಗಳು, ಬೌಲರ್ ಗಳನ್ನು ಎದುರಿಸಿದ ತಂತ್ರಗಾರಿಕೆ, ಹೋರಾಟ, ಮನೋಸ್ಥೈರ್ಯ ಮೆಚ್ಚುವಂತಹದ್ದು, ನಿಮ್ಮಬ್ಬರ ಬ್ಯಾಟಿಂಗ್ ಶೈಲಿ ಯುವ ಬೌಲರ್ ಗಳಿಗೆ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣುವುದಕ್ಕೆ ಮಾದರಿಯಾಗುವಂಥಹದ್ದು, ಏಕೆಂದರೆ ತಂಡಕ್ಕೆ ಯಾವಾಗ ಅದು ನೆರವಾಗುತ್ತದೆ ಎಂಬುದು ಹೇಳಲಾಗುವುದಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಬ್ರಿಸ್ಬೇನ್ ನಲ್ಲಿರುವ ಗಬ್ಬಾ ಕ್ರೀಡಾಂಗಣದಲ್ಲಿ 3 ನೇ ದಿನದಾಟದಂದು  ಶಾರ್ದೂಲ್ ಹಾಗೂ ಸುಂದರ್ 7 ನೇ ವಿಕೆಟ್ ಜೊತೆಯಾಟದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ. 

ಶಾರ್ದೂಲ್ ಹಾಗೂ ಸುಂದರ್ ಜೊತೆಯಾಟ 118 ರನ್ ಗಳ ಜೊತೆಯಾಟ ಆಡಿದ್ದು, ಕಪಿಲ್ ದೇವ್-ಮನೋಜ್ ಪ್ರಭಾಕರ್ ಅವರ 20 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 1991 ರಲ್ಲಿ 58 ರನ್ ಗಳ ಜೊತೆಯಾಟ ಆಡಿದ್ದರು. 

ಭಾರತ 186 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶಾರ್ದೂಲ್, ಸುಂದರ್ ಉತ್ತಮ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
 


 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp