ಮೈದಾನದಲ್ಲೇ ಸ್ಟೀವ್ ಸ್ಮಿತ್ ಕಾಲೆಳೆದ ರೋಹಿತ್ ಶರ್ಮಾ, ವಿಡಿಯೋ ವೈರಲ್!
ರಿಷಬ್ ಪಂತ್ ಬ್ಯಾಟಿಂಗ್ ಮಾರ್ಕ್ ಅಳಿಸಿ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಅವರನ್ನು ಮೈದಾನದಲ್ಲೇ ರೋಹಿತ್ ಶರ್ಮಾ ಕಾಲೆಳೆದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
Published: 18th January 2021 06:30 PM | Last Updated: 18th January 2021 06:32 PM | A+A A-

ರೋಹಿತ್ ಶರ್ಮಾ
ಬ್ರಿಸ್ಬೇನ್: ರಿಷಬ್ ಪಂತ್ ಬ್ಯಾಟಿಂಗ್ ಮಾರ್ಕ್ ಅಳಿಸಿ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಅವರನ್ನು ಮೈದಾನದಲ್ಲೇ ರೋಹಿತ್ ಶರ್ಮಾ ಕಾಲೆಳೆದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ತಂಡದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಇನ್ನು ಡ್ರಿಂಕ್ಸ್ ಬ್ರೇಕ್ ನಲ್ಲಿ ಸ್ಟೀವ್ ಸ್ಮಿತ್ ಬಂದು ಕ್ರೀಸ್ ಮಾರ್ಕ್ ಅನ್ನು ಬದಲಾಯಿಸಿದ ದೃಶ್ಯಗಳು ವಿಕೆಟ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
Rohit doing a Steve Smith #INDvsAUSTest #India #IndiavsAustralia #Australia #AUSvsIND #RohitSharma pic.twitter.com/ZclrUxQJXc
— SportsCafe (@IndiaSportscafe) January 18, 2021
ಈ ಘಟನೆ ಬಳಿಕ ಕ್ರಿಕೆಟ್ ಅಭಿಮಾನಿಗಳು ಸ್ಟೀವ್ ಸ್ಮಿತ್ ರ ಕ್ರೀಡಾ ಮನೋಭಾವವನ್ನು ಪ್ರಶ್ನಿಸಿದ್ದರು.
ಇನ್ನು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನದಂದು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಡ್ರಿಂಕ್ ಬ್ರೇಕ್ ನೀಡಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ಸ್ಟ್ರೈಕ್ ವಿಕೆಟ್ ಹತ್ತಿರ ಬಂದು ಕ್ರಿಸ್ ಅನ್ನು ಪರಿಶೀಲಿಸಿದರು. ನಂತರ ಬ್ಯಾಟಿಂಗ್ ಆ್ಯಕ್ಷನ್ ಮಾಡಿದರು. ಇದನ್ನೆಲ್ಲಾ ಸ್ಮಿತ್ ಗಮನಿಸುತ್ತಿದ್ದರು.