4ನೇ ಟೆಸ್ಟ್: ಸಿರಾಜ್, ಶಾರ್ದೂಲ್ ಮಾಕರ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್, ಟೀಂ ಇಂಡಿಯಾಗೆ 328 ರನ್ ಗುರಿ!

4ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್ ದಾಳಿ ನಡೆಸಿದ್ದು ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 294 ರನ್ ಗಳಿಗೆ ಆಲೌಟ್ ಆಗಿದೆ.

Published: 18th January 2021 03:00 PM  |   Last Updated: 18th January 2021 05:57 PM   |  A+A-


Team India

ಟೀಂ ಇಂಡಿಯಾ

Posted By : Vishwanath S
Source : PTI

ಬ್ರಿಸ್ಬೆನ್: 4ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್ ದಾಳಿ ನಡೆಸಿದ್ದು ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 294 ರನ್ ಗಳಿಗೆ ಆಲೌಟ್ ಆಗಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಗಳಿಸಿದ್ದ ಆಸ್ಟ್ರೇಲಿಯಾ ಭಾರತವನ್ನು 336 ರನ್ ಗಳಿಗೆ ಕಟ್ಟಿಹಾಕಿತ್ತು. ಹೀಗಾಗಿ 54 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು 294 ರನ್ ಗಳಿಗೆ ಸರ್ವಪತನ ಕಂಡಿತು. 

ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 1.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿ ಮುನ್ನುಗುತ್ತಿದ್ದಾಗ ಆಟಕ್ಕೆ ಮಳೆ ಕಾಟ ನೀಡಿ ಸ್ಥಗಿತ ಗೊಂಡಿತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (4) ಹಾಗೂ ಶುಭಮನ್ ಗಿಲ್ಲ (0) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸೀಸ್ ಪರ ಮಾರ್ಕಸ್ ಹ್ಯಾರೀಸ್ (38) ಹಾಗೂ ಡೇವಿಡ್ ವಾರ್ನರ್ (48) ಜೋಡಿ ಮೊದಲ ವಿಕೆಟ್ ಗೆ 89 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಮಾರ್ನಸ್ ಲಾಬುಷೇನ್ 25 ರನ್ ಗಳಿಗೆ ಆಟ ಮುಗಿಸಿದರು. ಮ್ಯಾಥು ವೇಡ್ ಖಾತೆ ತೆರೆಯದೆ ಸಿರಾಜ್ ಎಸೆತದಲ್ಲಿ ಔಟ್ ಆದರು.

ಐದನೇ ವಿಕೆಟ್ ಗೆ ಕಮ್ರನ್ ಗ್ರೀನ್ ಹಾಗೂ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ತಂಡಕ್ಕೆ 73 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸ್ಮಿತ್ 74 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 5 ರನ್ ಬಾರಿಸಿ ಸಿರಾಜ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿದರು.

ಆತಿಥೇಯ ತಂಡದ ಪರ ಕೆಳ ಕ್ರಮಾಂಕದಲ್ಲಿ ಜೊತೆಯಾಟಗಳು ಬರಲಿಲ್ಲ. ಗ್ರೀನ್ 37, ಟಿಮ್ ಪೇನ್ 27, ಪ್ಯಾಟ್ ಕಮಿನ್ಸ್ 28, ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. 

ಪದಾರ್ಪಣೆ ಸರಣಿ ಅಡುತ್ತಿರುವ ಮೊಹಮ್ಮದ್ ಸಿರಾಜ್ ಉತ್ತಮ ದಾಳಿ ಸಂಘಟಿಸಿದರು. ಇವರು ಆಸೀಸ್ ತಂಡದ ಸ್ಟಾರ್ ಆಟಗಾರರಿಗೆ ಕಾಟ ನೀಡಿದರು. ಸಿರಾಜ್ 19.5 ಓವರ್‌ಗಳಲ್ಲಿ 73 ರನ್‌ಗಳಿಗೆ ಐದು ವಿಕೆಟ್‌ ಪಡೆದು ಇತಿಹಾಸ ನಿರ್ಮಿಸಿದರು. ಠಾಕೂರ್ 19 ಓವರ್‌ಗಳಲ್ಲಿ 61 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಮತ್ತು ವಾಷಿಂಗ್ಟನ್ ಸುಂದರ್ 18 ಓವರ್‌ಗಳಲ್ಲಿ 80 ರನ್‌ಗಳಿಗೆ ಒಂದು ವಿಕೆಟ್ ಪಡೆದರು. 

Stay up to date on all the latest ಕ್ರಿಕೆಟ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp