ಗಬ್ಬಾ ಐತಿಹಾಸಿಕ ಜಯ: ಟೀಂ ಇಂಡಿಯಾಗೆ 5 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ
ಆಸ್ಟ್ರೇಲಿಯಾದ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಜಯದ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಟೀಂ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ 5 ಕೋಟಿ ರೂಗಳ ನಗದು ಬಹುಮಾನ ಘೋಷಣೆ ಮಾಡಿದೆ.
Published: 19th January 2021 02:17 PM | Last Updated: 19th January 2021 02:23 PM | A+A A-

ಸರಣಿ ಗೆದ್ದ ಟೀಂ ಇಂಡಿಯಾ ಸಂಭ್ರಮಾಚರಣೆ
ಬ್ರಿಸ್ಬೇನ್: ಆಸ್ಟ್ರೇಲಿಯಾದ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಜಯದ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಟೀಂ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ 5 ಕೋಟಿ ರೂಗಳ ನಗದು ಬಹುಮಾನ ಘೋಷಣೆ ಮಾಡಿದೆ.
ಈ ಕುರಿತಂತೆ ಸ್ವತಃ ಬಿಸಿಸಿಐ ಟ್ವೀಟ್ ಮಾಡಿದ್ದು, ಗಬ್ಬಾ ಟೆಸ್ಟ್ ನ ಜಯದಿಂದ ಸಂತಸಗೊಂಡಿರುವ ಬಿಸಿಸಿಐ, ಈ ಸರಣಿ ಜಯ ಭಾರತೀಯ ಕ್ರಿಕೆ್ಟ್ ನ ಇತಿಹಾಸದಲ್ಲಿ ಸುದೀರ್ಘ ಕಾಲದವರೆಗೂ ನೆನಪಿನಲ್ಲಿರುತ್ತದೆ ಎಂದು ಹೇಳಿದೆ. ಅಂತೆಯೇ ಟೀಂ ಇಂಡಿಯಾದ ಆಟಗಾರರು ಮತ್ತು ತಂಡದ ಕೋಚಿಂಗ್ ಮತ್ತು ಇತರೆ ಸಿಬ್ಬಂದಿಗಳಿಗೆ 5 ಕೋಟಿ ರೂ ನಗದು ಘೋಷಣೆ ಮಾಡಿದೆ.
"The BCCI has announced INR 5 Crore as team bonus"- BCCI Secretary Mr @JayShah tweets.#TeamIndia pic.twitter.com/vgntQuyu8V
— BCCI (@BCCI) January 19, 2021
ಅಂತೆಯೇ ಟೀಂ ಇಂಡಿಯಾದ ಐತಿಹಾಸಿಕ ಜಯಕ್ಕೆ ಮಾಜಿ ಮತ್ತು ಹಾಲಿ ಆಟಗಾರರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
WHAT A WIN!!! Yessssss. To everyone who doubted us after Adelaide, stand up and take notice. Exemplary performance but the grit and determination was the standout for us the whole way. Well done to all the boys and the management. Enjoy this historic feat lads. Cheers