ಬಾಂಗ್ಲಾ ವಿರುದ್ಧ ಏಕದಿನ ಸರಣಿ: ಒಂದೇ ಪಂದ್ಯದಲ್ಲಿ ವಿಂಡೀಸ್ ತಂಡಕ್ಕೆ 6 ಆಟಗಾರರು ಪಾದಾರ್ಪಣೆ
ಬಾಂಗ್ಲಾದೇಶದ ವಿರುದ್ಧ ಮಿರ್ ಪುರ ಏಕದಿನ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ನೆನಪಿನಲ್ಲಿ ಉಳಿಯ ಪಂದ್ಯವಾಗಿದ್ದು, ಈ ಪಂದ್ಯದ ಮೂಲಕ ವಿಂಡೀಸ್ ಪರ 6 ಆಟಗಾರರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.
Published: 20th January 2021 04:44 PM | Last Updated: 20th January 2021 06:01 PM | A+A A-

ವಿಂಡೀಸ್ ತಂಡಕ್ಕೆ 6 ಆಟಗಾರರು ಪದಾರ್ಪಣೆ
ಮಿರ್ ಪುರ: ಬಾಂಗ್ಲಾದೇಶದ ವಿರುದ್ಧ ಮಿರ್ ಪುರ ಏಕದಿನ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ನೆನಪಿನಲ್ಲಿ ಉಳಿಯ ಪಂದ್ಯವಾಗಿದ್ದು, ಈ ಪಂದ್ಯದ ಮೂಲಕ ವಿಂಡೀಸ್ ಪರ 6 ಆಟಗಾರರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಮುಖಾಮುಖಿಯಾಗಿದ್ದು, ಇಂದು ಅಂದರೆ ಜನವರಿ 20ರಂದು ಮೊದಲ ಪಂದ್ಯ ಬಾಂಗ್ಲಾದೇಶದ ಮಿರ್ ಪುರ್ ನ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಆರು ಯುವ ಆಟಗಾರರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಕೀಲ್ ಹೊಸೈನ್, ಆಂಡ್ರೆ ಮೆಕಾರ್ಥಿ, ಚೆಮರ್ ಹೋಲ್ಡರ್, ಜೋಶುವಾ ಡಾ ಸಿಲ್ವಾ, ಕೈಲ್ ಮೇಯರ್ಸ್ ಮತ್ತು ಎನ್ಕ್ರುಮಾ ಬೊನ್ನರ್ ಈ ಆರು ಆಟಗಾರರು ವಿಂಡೀಸ್ ಪರ ಏಕದಿನ ಕ್ರಿಕೆಟ್ಗೆ ಬುಧವಾರ ಪದಾರ್ಪಣೆಯನ್ನು ಮಾಡಿದ್ದಾರೆ.
Congratulations to our 6 ODI debutants!
— Windies Cricket (@windiescricket) January 20, 2021
WI look forward to watching them put in remarkable performances for the #MenInMaroon#BANvWI #WIReady pic.twitter.com/M8RGFLlCnR
ಜೇಸನ್ ಮೊಹಮ್ಮದ್ ನೇತೃತ್ವದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಯುವ ಬಳಗದೊಂದಿಗೆ ಬಾಂಗ್ಲಾದೇಶಕ್ಕೆ ಬಂದಿಳಿದಿತ್ತು. ಕಳೆದ ವಾರ ವಿಂಡೀಸ್ ಆಟಗಾರ ಹೇಡೆನ್ ವಾಲ್ಶ್ ಜೂನಿಯರ್ಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಹೀಗಾಗಿ ತಂಡಕ್ಕೆ ತೀವ್ರ ಹಿನ್ನಡೆಯಾಗಿತ್ತು.
WI have 6 #MenInMaroon making their debut in today’s first ODI!
— Windies Cricket (@windiescricket) January 20, 2021
They were presented their caps by former WI all-rounder and current team manager, Rawl Lewis! #BANvWI #WIReady pic.twitter.com/xQRfh46JZC
ಬಾಂಗ್ಲಾದೇಶ ತಂಡ ಕಳೆದ 9 ತಿಂಗಳ ಹಿಂದೆ ನಾಯಕನಾಗಿ ಆಯ್ಕೆಯಾದ ತಮೀಮ್ ಇಕ್ಬಾಲ್ ನೇತೃತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದೆ. ಆದರೆ ಈ ಪಂದ್ಯದಲ್ಲಿ ನಿಷೇಧಕ್ಕೆ ಒಳಗಾಗಿ ತಂಡಕ್ಕೆ ವಾಪಾಸಾಗಿರುವ ಮಾಜಿ ನಾಯಕ ಶಕೀಬ್ ಅಲ್ ಹಸ್ಸನ್ ಮರಳಿರುವುದು ಬಾಂಗ್ಲಾದೇಶ ತಂಡದ ಪಾಲಿಗೆ ಪ್ರಮುಖವಾಗಿದೆ. ಈ ಎರಡು ತಂಡಗಳು ಕೂಡ 2023ರ ವಿಶ್ವಕಪ್ನಲ್ಲಿ ಪಾಳ್ಗೊಳ್ಳಲು ಅರ್ಹತೆಯನ್ನು ನೀಡುವ ವಿಶ್ವಕಪ್ ಸೂಪರ್ ಲೀಗ್ನ ಮೊದಲ ಪಂದ್ಯದಲ್ಲಿ ಪಾಲ್ಗೊಂಡಿದೆ.