ಚೆನ್ನೈ ಸೂಪರ್ ಕಿಂಗ್ಸ್ ಜತೆಗಿನ ಒಪ್ಪಂದ ಅಂತ್ಯ: ಹರ್ಭಜನ್ ಸಿಂಗ್ ಘೋಷಣೆ

ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಎರಡು ವರ್ಷಗಳ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಹಿರಿಯ ಭಾರತೀಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಘೋಷಿಸಿದ್ದಾರೆ.

Published: 20th January 2021 04:44 PM  |   Last Updated: 20th January 2021 06:00 PM   |  A+A-


ಹರ್ಭಜನ್ ಸಿಂಗ್

Posted By : Raghavendra Adiga
Source : PTI

ನವದೆಹಲಿ: ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಎರಡು ವರ್ಷಗಳ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಹಿರಿಯ ಭಾರತೀಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಘೋಷಿಸಿದ್ದಾರೆ.

40 ವರ್ಷದ ಕ್ರಿಕೆಟಿಗ ಮುಂದಿನ ಐಪಿಎಲ್ ಹರಾಜಿಗೆ ಮುಂಚಿತವಾಗಿ ಈ ವಿಚಾರ ಬಹಿರಂಗಪಡಿಸಿದ್ದಾರೆ.  ಮುಂಬರುವ ಆವೃತ್ತಿಯ ಉಳಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಕೆಲ ಗಂಟೆಗಳ ಮುನ್ನ ಅವರ ಈ ಹೇಳಿಕೆ ಹೊರಬಿದ್ದಿದೆ.

"ಚೆನ್ನೈ ತಂಡದೊಡನೆ ನನ್ನ ಒಪ್ಪಂದವು ಮುಕ್ತಾಯಗೊಂಡಿದೆ. ಈ ತಂಡಕ್ಕಾಗಿ ಆಡಿದ್ದ ಅನುಭವ ಉತ್ತಮವಾಗಿತ್ತು.ಸುಂದರ ನೆನಪುಗಳು ಹಾಗೂ ಕೆಲ ಉತ್ತಮ ಸ್ನೇಹಿತರು ನನಗಿಲ್ಲಿ ಸಿಕ್ಕಿದ್ದಾರೆ. ನಾನವುಗಳನ್ನು ಮುಂಬರುವ ವರ್ಷಗಳಲ್ಲಿ ಪ್ರೀತಿಯಿಂದ ನೆನೆಯುತ್ತೇನೆ." ಹರ್ಭಜನ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಚೆನ್ನೈ ತಂಡದ ನಿರ್ವಾಹಕರು ಮತ್ತು ಅಭಿಮಾನಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.

ಹರ್ಭಜನ್ ಸಿಂಗ್  2018 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿದ್ದರು.ಎರಡು ವರ್ಷಗಳ ಅಮಾನತಿನ ನಂತರ ತಂಡಕ್ಕೆ ಹೊಂತಿರುಗಿದ್ದ ಅವರು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ  ಯುಎಇಯಲ್ಲಿ ಕಳೆದ ವರ್ಷನಡೆದಿದ್ದ ಐಪಿಎಲ್‌ನ 13 ನೇ ಆವೃತ್ತಿಯಲ್ಲಿ ಆಡದೆ ಇರಲು ತೀರ್ಮಾನಿಸಿದ್ದ ಇಬ್ಬರು ಸಿಎಸ್‌ಕೆ ಆಟಗಾರರಲ್ಲಿ ಹರ್ಭಜನ್ ಕೂಡ ಒಬ್ಬರಾಗಿದ್ದಾರೆ.

2019 ರ ಕ್ರಿಕೆಟ್ ಋತುವಿನಲ್ಲಿ ಹರ್ಭಜನ್ 11 ಪಂದ್ಯಗಳಿಂದ 19.5 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಪಡೆದರು. 160 ಐಪಿಎಲ್ ಪಂದ್ಯಗಳಲ್ಲಿ, ಹರ್ಭಜನ್ 26.44 ರ ಸರಾಸರಿಯಲ್ಲಿ 150 ವಿಕೆಟ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ   417 ಟೆಸ್ಟ್ ವಿಕೆಟ್, 269 ಏಕದಿನ 25 ಟಿ 20 ವಿಕೆಟ್ ಪಡೆಇದ್ದಾರೆ.  ಭಾರತದಲ್ಲಿ 2016 ರಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಆಡಿದ್ದ ಇವರು  103 ಟೆಸ್ಟ್, 236 ಏಕದಿನ ಮತ್ತು 28 ಟಿ 20 ಐ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp