ಫ್ರ್ಯಾಂಚೈಸ್ ಕ್ರಿಕೆಟ್‌ಗೆ ಲಸಿತ್ ಮಾಲಿಂಗ ಗುಡ್ ಬೈ!

ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಫ್ರ್ಯಾಂಚೈಸ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಬುಧವಾರ ಪ್ರಕಟಿಸಿದೆ. ಶ್ರೀಲಂಕಾದ ವೇಗದ ಬೌಲರ್ ಈ ತಿಂಗಳ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ತನ್ನ ನಿರ್ಧಾರವನ್ನು ತಿಳಿಸಿದ್ದರು.

Published: 21st January 2021 11:24 AM  |   Last Updated: 21st January 2021 12:40 PM   |  A+A-


ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಾಲಿಂಗ

Posted By : Raghavendra Adiga
Source : Online Desk

ಕೊಲಂಬೋ: ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಫ್ರ್ಯಾಂಚೈಸ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಬುಧವಾರ  ಪ್ರಕಟಿಸಿದೆ. ಶ್ರೀಲಂಕಾದ ವೇಗದ ಬೌಲರ್ ಈ ತಿಂಗಳ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ತನ್ನ ನಿರ್ಧಾರವನ್ನು ತಿಳಿಸಿದ್ದರು.

36 ವರ್ಷದ ಮಾಲಿಂಗ, “ಕುಟುಂಬದೊಂದಿಗೆ ಚರ್ಚಿಸಿದ ನಂತರ, ಎಲ್ಲಾ ಫ್ರ್ಯಾಂಚೈಸ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಇದೀಗ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ರೋಗದ ಉಲ್ಬಣಮತ್ತು ಪ್ರಯಾಣದ ಮೇಲಿನ ನಿರ್ಬಂಧಗಳು ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ವರ್ಷ ಫ್ರ್ಯಾಂಚೈಸ್ ಕ್ರಿಕೆಟ್‌ನಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನನಗೆ ಕಷ್ಟವಾಗುತ್ತದೆ ಮತ್ತು ಆದ್ದರಿಂದ ಈಗ ಈ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಭಾವಿಸಿದ್ದೇನೆ." ಎಂದಿದ್ದಾರೆ.

ನಾನು ಇತ್ತೀಚಿನ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನೊಂದಿಗೆ ಇದೇ ವಿಚಾರ ಚರ್ಚಿಸಿದ್ದೇನೆ ಮತ್ತು ಅವರು ನನ್ನಗೆ ಬಹಳವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಐಪಿಎಲ್ ಎರಡನೇ ಸೀಸನ್ ನಿಂದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದ ಮಾಲಿಂಗ ಹೇಳಿದರು.

"ಅಂಬಾನಿ ಕುಟುಂಬಕ್ಕೆ, ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ನಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ನಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. 12 ವರ್ಷಗಳ ಕಾಲ ಅದ್ಭುತವಾದ ಅವಕಾಶವನ್ನು ನೀಡಿದ ನಿಮಗೆ ನನ್ನ ಕೃತಜ್ಞತೆ ಗಳು.

"ಮುಂಬೈ ಇಂಡಿಯನ್ಸ್ ನನ್ನನ್ನು ಕುಟುಂಬದವರಂತೆ ನೋಡಿಕೊಂಡಿದೆ, ಮೈದಾನದಲ್ಲಿ ಮತ್ತು ಹೊರಗಿನ ಪ್ರತಿಯೊಂದು ಪರಿಸ್ಥಿತಿಯಲ್ಲೂ ನನಗೆ 100% ಬೆಂಬಲ ನೀಡಿದೆ. ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ನನ್ನ ಸಹಜ ಆಟವನ್ನು ಆಡುವ ವಿಶ್ವಾಸ ಮತ್ತು ಸ್ವಾತಂತ್ರ್ಯವನ್ನು ಯಾವಾಗಲೂ ನೀಡಿದೆ. ನಾನಿಲ್ಲಿ ತುಂಬಾ ಸಂತೋಷದ ನೆನಪುಗಳನ್ನು ಸಂಗ್ರಹಿಸಿದ್ದೇನೆ ಮತ್ತುವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫ್ರ್ಯಾಂಚೈಸ್ ಗಾಗಿ ಇಷ್ಟು ದಿನ ಆಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಶ್ರೀಮತಿ ನೀತಾ ಅಂಬಾನಿ, ತರಬೇತುದಾರ ಮಹೇಲಾ (ಜಯವರ್ಧನೆ), ಆಕಾಶ್ (ಅಂಬಾನಿ) ಮತ್ತು ಎಂಐ ಕುಟುಂಬಕ್ಕೆ ಮುಂಬರುವ ಸೀಸನ್ ಗಾಗಿ ಶುಭ ಹಾರೈಸುತ್ತೇನೆ ”ಎಂದು ಅವರು ಹೇಳಿದ್ದಾರೆ. 


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp