ಐಪಿಎಲ್: ಚೆನ್ನೈ ತೆಕ್ಕೆ ಸೇರಿದ ರಾಬಿನ್ ಉತ್ತಪ್ಪ
ರಾಜಸ್ಥಾನ್ ರಾಯಲ್ಸ್ ತಮ್ಮ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರನ್ನು ಕೈ ಬಿಟ್ಟಿದ್ದು, ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ನ 2021 ರ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ತಂಡದ ಪರ ಉತ್ತಪ್ಪ ಆಡಲಿದ್ದಾರೆ.
Published: 22nd January 2021 09:26 PM | Last Updated: 22nd January 2021 09:28 PM | A+A A-

ರಾಬಿನ್ ಉತ್ತಪ್ಪ
ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಮ್ಮ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರನ್ನು ಕೈ ಬಿಟ್ಟಿದ್ದು, ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ನ 2021 ರ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ತಂಡದ ಪರ ಉತ್ತಪ್ಪ ಆಡಲಿದ್ದಾರೆ.
2020 ರ ಋತುವಿನ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ಉತ್ತಪ್ಪನನ್ನು ಖರೀದಿಸಿತ್ತು. ಮತ್ತು ಯುಎಇಯಲ್ಲಿ ಆಡಿದ ಋತುವಿನಲ್ಲಿ ಉತ್ತಪ್ಪ 12 ಪಂದ್ಯಗಳನ್ನು ಆಡಿದ್ದಾರೆ.
ಚೆನ್ನೈನೊಂದಿಗೆ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ರಾಜಸ್ಥಾನ್ ಉತ್ತಪ್ಪಾಗೆ ಶುಭ ಹಾರೈಸಿದೆ. ಈಗ ಚೆನ್ನೈ ಜೊತೆ ಹೊಸ ಇನ್ನಿಂಗ್ಸ್ ಆರಂಭಿಸಲು ಎದುರು ನೋಡುತ್ತಿದ್ದೇನೆ ಎಂದು ಉತ್ತಪ್ಪ ಹೇಳಿದ್ದಾರೆ.